ಪತಿ ಬಿರಿಯಾನಿ ತಿಂದಿದ್ದಕ್ಕೆ ಮನೆಬಿಟ್ಟ ಮಹಿಳೆ

7

ಪತಿ ಬಿರಿಯಾನಿ ತಿಂದಿದ್ದಕ್ಕೆ ಮನೆಬಿಟ್ಟ ಮಹಿಳೆ

Published:
Updated:

ಬೆಂಗಳೂರು: ಪತಿ ಹಾಗೂ ಮಗ ಬಿರಿಯಾನಿ ತಿಂದರೂ ಎಂಬ ಕಾರಣಕ್ಕೆ ಅನಿತಾ ಸರ್ಕಾರ ಎಂಬುವರು ಮನೆಬಿಟ್ಟು ಹೋಗಿದ್ದಾರೆ. ಈ ಸಂಬಂಧ ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ರಾಜು ಹಾಗೂ ಅನಿತಾ ದಂಪತಿ, ಕೆಲಸ ಅರಸಿ ಮಗನ ಸಮೇತ ನಗರಕ್ಕೆ ಬಂದಿದ್ದರು.  ಅನಿತಾ, ಕೆಲವು ತಿಂಗಳ ಹಿಂದಷ್ಟೇ ಗರ್ಭೀಣಿ ಸಹ ಆಗಿದ್ದರು. ಆಗಸ್ಟ್ 27ರಂದು ರಾಜು, ಮನೆಗೆ ಬಿರಿಯಾನಿ ತಂದು ಮಗನ ಜೊತೆ ತಿಂದಿದ್ದರು. ಅದರಿಂದಾಗಿ ಅನಿತಾ ಸಿಟ್ಟಾಗಿದ್ದರು ಎಂದು ಪೊಲೀಸರು ಹೇಳಿದರು.

‘ನನಗೆ ಬಿರಿಯಾನಿ ವಾಸನೆ ಆಗುವುದಿಲ್ಲ. ಇನ್ಮುಂದೆ ನಾನು ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ನೀವು ನಿತ್ಯವೂ ಹೋಟೆಲ್‌ನಿಂದಲೇ ಊಟ ತಂದು ತಿನ್ನಿ’ ಎಂದು ಅನಿತಾ ಹೇಳಿದ್ದರು. ಮರುದಿನ ರಾಜು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಅವಾಗಲೇ ಅನಿತಾ ಮನೆ ಬಿಟ್ಟು ಹೋಗಿದ್ದಾರೆ. ಪತಿಯೇ ಠಾಣೆಗೆ ಬಂದು ನಾಪತ್ತೆ ದೂರು ಕೊಟ್ಟಿದ್ದಾರೆ ಎಂದರು.

ಹೆರಿಗೆ ನಂತರ ವಾಪಸ್‌ ಬರುವೆ: ‘ದೂರು ದಾಖಲಾಗುತ್ತಿದ್ದಂತೆ ಅನಿತಾ ಅವರನ್ನು ಪತ್ತೆ ಹಚ್ಚಲಾಯಿತು. ಸದ್ಯ ತವರು ಮನೆಯಲ್ಲಿದ್ದಾರೆ. ‘ಬಿರಿಯಾನಿ ತಿಂದಿದ್ದಕ್ಕೆ ಮನೆ ಬಿಟ್ಟು ಬಂದಿದ್ದೇನೆ. ಹೆರಿಗೆ ಮುಗಿಸಿಕೊಂಡು ವಾಪಸ್‌ ಬರುತ್ತೇವೆ’ ಎಂದು ಅನಿತಾ ಹೇಳಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 12

  Happy
 • 11

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !