ಪ್ರಕೃತಿ ಜೀವಂತವಾಗಿರಿಸಿ: ವಜುಭಾಯಿ ವಾಲಾ

7
64ನೇ ವನ್ಯಜೀವಿ ಸಪ್ತಾಹಕ್ಕೆ ತೆರೆ

ಪ್ರಕೃತಿ ಜೀವಂತವಾಗಿರಿಸಿ: ವಜುಭಾಯಿ ವಾಲಾ

Published:
Updated:
Deccan Herald

ಬೆಂಗಳೂರು: ಪ್ರಕೃತಿಯನ್ನು ಜೀವಂತವಾಗಿರಿಸಿ. ನಾವೂ ಜೀವಂತವಾಗಿರುತ್ತೇವೆ. –ಇದು ರಾಜ್ಯಪಾಲ ವಜುಭಾಯಿ ವಾಲಾ ಅವರ ಕಳಕಳಿಯ ಮಾತು. 

ನಗರದಲ್ಲಿ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡ 64ನೇ ವನ್ಯಜೀವಿ ಸಪ್ತಾಹದಲ್ಲಿ ಅವರು ಮಾತನಾಡಿದರು. 

ಪರಿಸರ ಸಂರಕ್ಷಣೆ ವಿಷಯ ಆಧಾರಿತ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಅವರು. ಬಾಲ್ಯದಿಂದಲೇ ನಿಸರ್ಗ ರಕ್ಷಿಸುವ ಸಂಸ್ಕಾರ ಹೊಂದಬೇಕು ಎಂದು ಕಿವಿಮಾತು ಹೇಳಿದರು.

ರಂಗನ ಸಾವಿನ ಬೇಸರ: ಮತ್ತಿಗೋಡು ಆನೆ ಶಿಬಿರದ ಬಳಿ ಸಾವಿಗೀಡಾದ ಸಾಕಾನೆ ರಂಗ, ಕೀಟನಾಶಕ ಸಿಂಪಡಿಸಿದ ಬೆಳೆ ತಿಂದು ಸಾವಿಗೀಡಾದ ಜಿಂಕೆಗಳು ಈ ಎಲ್ಲ ಘಟನೆಗಳು ವನ್ಯಜೀವಿ ಸಪ್ತಾಹದ ಅವಧಿಯಲ್ಲೇ ನಡೆದಿರುವುದಕ್ಕೆ ಅರಣ್ಯ ಸಚಿವ ಆರ್‌. ಶಂಕರ್‌ ಅವರು ಬೇಸರ ವ್ಯಕ್ತಪಡಿಸಿದರು. 

ಸಪ್ತಾಹದ ಅಂಗವಾಗಿ ನವಿಲು, ಗಿಳಿ, ಹುಲಿ ಸೇರಿದಂತೆ ಕಾಡಿನ ಜೀವಗಳು ಶಾಲಾ ಮಕ್ಕಳ ಮೂಲಕ ವೇದಿಕೆಯಲ್ಲಿ ಅವತರಿಸಿದವು. ಬದುಕಿ, ಬದುಕಲು ಬಿಡಿ ಎಂಬ ಜೀವಪರ ದನಿಯನ್ನು ಅವು ವ್ಯಕ್ತಪಡಿಸಿದವು.

ವಿವಿಧ ರಕ್ಷಿತಾರಣ್ಯಗಳ ಅಪರೂಪದ ಪ್ರಾಣಿಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ಭಾರತೀಯ ವನ್ಯಜೀವಿಗಳ ಕೈಪಿಡಿ, ಕಾಡ್ಗಿಚ್ಚಿನ ಬಗ್ಗೆ ಜಾಗೃತಿ ಮೂಡಿಸುವ ಒಡಲಸಿರಿ ಸಾಕ್ಷ್ಯಚಿತ್ರದ ಸಿ.ಡಿ.ಯನ್ನು ರಾಜ್ಯಪಾಲರು ಬಿಡುಗಡೆ
ಗೊಳಿಸಿದರು.ಬನ್ನೇರುಘಟ್ಟ ಅರಣ್ಯದಲ್ಲಿ ವಾಸಿಸುತ್ತಿರುವ 21 ಸಸ್ತನಿಗಳ ಕುರಿತಾದ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. 

‘ದೊಡ್ಡ ಹುಲಿಗಳು ಅಪಾಯದ ಅಂಚಿನಲ್ಲಿವೆ’ ಎಂಬುದು ಈ ವರ್ಷದ ವನ್ಯಜೀವಿ ಸಪ್ತಾಹದ ಘೋಷ ವಾಕ್ಯ.

ಸಿಂಹಗಳ ಸಾವು: ರಾಜ್ಯಪಾಲ ಕಳವಳ

ಗುಜರಾತ್‌ನಲ್ಲಿ ಸಿಂಹಗಳು ಸರಿಯಾದ ಕಾಡು ಆಹಾರ ಸಿಗದೆ ಸಾವನ್ನಪ್ಪಿವೆ. ವೈರಸ್‌ ಸೋಂಕಿತ ನಾಡು ಪ್ರಾಣಿಗಳ ಮಾಂಸ ತಿಂದ ಸಿಂಹಗಳು ರೋಗಕ್ಕೊಳಗಾಗಿ ಸಾವನ್ನಪ್ಪಿದವು. ಇಂಥ ಘಟನೆ ನಡೆಯಬಾರದು. ಅವುಗಳಿಗೆ ಕಾಡಿನಲ್ಲೇ ಆಹಾರ ಸಿಗುವಂತಾಗಬೇಕು ಎಂದು ರಾಜ್ಯಪಾಲರು ಆಶಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !