ಬೆಂಗಳೂರು: ‘ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಫ್ಯಾಷನ್ ಆಗಿದೆ. ಸಂರಕ್ಷಣಾ ಕಾರ್ಯದಲ್ಲಿ ತೊಡಗುವವರು ಮೊದಲು ನಮ್ಮ ರಾಜ್ಯದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು’ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅಭಿಪ್ರಾಯಪಟ್ಟರು.

ಅಂಕಿತ ಪುಸ್ತಕ ಸಂಸ್ಥೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರ ‘ಕಾಡಿನ ಗೆಳೆಯರ ಕಾಡುವ ಕಥೆಗಳು’ ಹಾಗೂ ‘ಕಾಡಿನೊಳಗೊಂದು ಮನೆಯ ಮಾಡಿ’ ಪುಸ್ತಕ ಜನಾರ್ಪಣೆಯಾಯಿತು. ಬಳಿಕ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವವರು ಇಲ್ಲಿನ ಜನ, ಭಾಷೆ, ಸಂಸ್ಕೃತಿ ಎಲ್ಲವನ್ನೂ ಅರಿತುಕೊಳ್ಳಬೇಕು. ಗೂಳಿಯಂತೆ ಧೈರ್ಯದಿಂದ ಮುನ್ನುಗ್ಗಬೇಕು’ ಎಂದರು.

ಮೇಕೆದಾಟು ಯೋಜನೆ ಬಗ್ಗೆ ಪ್ರೇಕ್ಷಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೇಕೆದಾಟು ಯೋಜನೆ ಪರಿಸರದ ಜತೆಗೆ ಬೆಂಗಳೂರಿಗೂ ಮಾರಕ. ಈ ಯೋಜನೆ ಜಾರಿ ಮಾಡಿದರೆ ಐದು ಸಾವಿರ ಎಕರೆ ಕಾಡು ಮುಳುಗುತ್ತದೆ. 15 ಲಕ್ಷದಷ್ಟು ಮರಗಳು ನಾಶವಾಗುತ್ತವೆ. ಆದ್ದರಿಂದ ಮೇಕೆದಾಟು ಅಣೆಕಟ್ಟೆ ನಿರ್ಮಿಸಲು ಜಾಗ ಬದಲಾಯಿಸಬೇಕು. ಇದಕ್ಕೆ ಶಿವನಸಮುದ್ರ ಉತ್ತಮ ಜಾಗ’ ಎಂದರು.

‘ಬೆಂಗಳೂರಿನಲ್ಲಿ ನಾಲ್ಕು ವಿದೇಶಿ ಜಾತಿಯ ಮರಗಳನ್ನು ಕಡಿದರೆ ಹತ್ತಾರು ಜನ ಬೀದಿಗಿಳಿದು ಮಾನವ ಸರಪಳಿ ನಿರ್ಮಿಸುತ್ತಾರೆ. ಆದರೆ, ಮೇಕೆದಾಟು ಯೋಜನೆಯಡಿ 15 ಲಕ್ಷದಷ್ಟು ಮರಗಳು ನಾಶವಾಗುವುದನ್ನು ಖಂಡಿಸಿ ಯಾರೂ ಮಾನವ ಸರಪಳಿ ನಿರ್ಮಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಪುಸ್ತಕ ಜನಾರ್ಪಣೆ ಮಾಡಿ ಮಾತನಾಡಿದ ವಿಜ್ಞಾನ ಬರಹಗಾರ ನಾಗೇಶ ಹೆಗಡೆ, ‘ಕಾಡಿಗೆ ಮನುಷ್ಯರು ಹೋದರೆ ಅಲ್ಲಿನ ಪ್ರಾಣಿ–ಪಕ್ಷಿಗಳಿಗೆ ಯಾವೆಲ್ಲ ಸಂಕಟಗಳು ಎದುರಾಗುತ್ತವೆ ಎನ್ನುವುದನ್ನು ಪುಸ್ತಕದಲ್ಲಿ ಬರೆಯಲಾಗಿದೆ’ ಎಂದು ಹೇಳಿದರು.

ಪತ್ರಕರ್ತ ಕಟ್ಟೆ ಗುರುರಾಜ್ ಸಂವಹನ ನಡೆಸಿದರು. ಇದಕ್ಕೂ ಮೊದಲು ಸುಮನ ಚಂದ್ರಶೇಖರ್ ಮತ್ತು ಹಂಸನಾದ ತಂಡದಿಂದ ಲಘು ಸಂಗೀತ ಕಾರ್ಯಕ್ರಮ ನಡೆಯಿತು.

‘ಅನುಮತಿ ಪಡೆಯದೆ ಕ್ರೀಡಾಂಗಣ’

‘ಕಾನೂನಿನ ಪ್ರಕಾರ ಅನುಮತಿ ಪಡೆಯದೆ ಕಾಡಿನ ಸಮೀಪ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಸರ್ಕಾರದಿಂದಲೇ ಕಾನೂನು ಉಲ್ಲಂಘನೆ ಸರಿಯಲ್ಲ’ ಎಂದು ಸಂಜಯ್ ಗುಬ್ಬಿ ಆಕ್ಷೇಪ ವ್ಯಕ್ತಪಡಿಸಿದರು.

‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಒಂದು ಕಿ.ಮೀ. ದೂರದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ. ಈ ಕ್ರೀಡಾಂಗಣ ನಿರ್ಮಾಣಕ್ಕೆ ಪರಿಸರ ಅನುಮತಿಯನ್ನು ಸರ್ಕಾರ ಪಡೆದಿಲ್ಲ. ಈ ರೀತಿ ಕ್ರೀಡಾಂಗಣವನ್ನು ಕಾಡಿನ ಸಮೀಪ ಮಾಡದೆ ದೂರದ ಪ್ರದೇಶದಲ್ಲಿ ನಿರ್ಮಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.