ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗೆ ನೀಡಲು ಡ್ರಗ್ಸ್ ತಂದಿದ್ದ ಯುವತಿಯನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ರಿತಿಕಾ ರೈ ಬಂಧಿತ ಯುವತಿ. ಜೈಲಿನ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಯುವತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪರಪ್ಪನ ಅಗ್ರಹಾರ ಜೈಲಿನ ವಿಚಾರಣಾಧೀನ ಕೈದಿ ಫರ್ಹಾನ್ ಖಾನ್ ಅವರನ್ನು ಭೇಟಿಯಾಗಲು ಮಾರ್ಚ್ 26ರಂದು ಯುವತಿ ಬಂದಿದ್ದರು. ಯುವತಿಯನ್ನು ಸಿಬ್ಬಂದಿ ತಪಾಸಣೆಗೆ ಒಳಪಡಿಸಿದಾಗ ಅನುಮಾನ್ಪಾಸದ ವಸ್ತುಗಳು ಇರುವುದು ಪತ್ತೆಯಾಗಿತ್ತು. ಪರಿಶೀಲಿಸಿದಾಗ ಡ್ರಗ್ಸ್, ಬೀಡಿ ಹಾಗೂ ಮೂರು ಏರ್ಟೆಲ್ ಸಿಮ್ ಕಾರ್ಡ್ಗಳನ್ನು ಬಿಳಿ ಬಣ್ಣದ ಕವರ್ನಲ್ಲಿ ಅಡಗಿಸಿಕೊಂಡಿರುವುದು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದರು.

ಕಾರಾಗೃಹದ ಪ್ರಭಾರ ಅಧೀಕ್ಷಕ ಶಿವಾನಂದ ಶಿವಪುರ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಈ ಹಿಂದೆ ಇದೇ ಮಾದರಿಯಲ್ಲಿ ನಿಷೇಧಿತ ವಸ್ತುಗಳನ್ನು ಸಾಗಣೆ ಯತ್ನ ಆರೋಪದ ಅಡಿ ಯುವತಿಯನ್ನು ಬಂಧಿಸಲಾಗಿತ್ತು. ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ ರಿತಿಕಾ ಮತ್ತೆ ಅದೇ ಮಾದರಿಯ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದರು.

ಎರಡು ಮೊಬೈಲ್ ಜಪ್ತಿ: ನಿಷೇಧಿತ ವಸ್ತುಗಳ ಬಳಕೆ ವಿರುದ್ಧ ಕಾರ್ಯಾಚರಣೆ ಬಿಗಿಗೊಳಿಸಿರುವ ಜೈಲು ಅಧಿಕಾರಿಗಳು ಅನಿರೀಕ್ಷಿತ ತಪಾಸಣೆ ವೇಳೆ ಎರಡು ಮೊಬೈಲ್ ಹಾಗೂ ಎರಡು ಸಿಮ್ ಕಾರ್ಡ್ ಪತ್ತೆಯಾಗಿವೆ.

ಈ ಸಂಬಂಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ರಿಜ್ವಾನ್ ಅಲಿ ಹಾಗೂ ಮೊಹಮ್ಮದ್ ಸಾಧಿಕ್ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್ 27ರಂದು ಸಹಾಯಕ ಅಧೀಕ್ಷಕಿ ಸುನಂದ ಅವರ ನೇತೃತ್ವದಲ್ಲಿ ಭದ್ರತಾ ವಿಭಾಗ-3ರಲ್ಲಿ 1ನೇ ಕೊಠಡಿಯಲ್ಲಿ ತಪಾಸಣೆ ನಡೆಸುವಾಗ ಮೊಬೈಲ್ ಪತ್ತೆ ಆಗಿದ್ದವು. ಸಿಬ್ಬಂದಿ ಮಹೇಶ್ ನಾಯಕ್ ಅವರು ವಶಕ್ಕೆ ಪಡೆಯಲು ಮುಂದಾದಾಗ ಆರೋಪಿಗಳು ಏರುಧ್ವನಿಯಲ್ಲಿ ಮಾತನಾಡಿದ್ದಾರೆ.

‘ಮನೆಗೆ ಹೋಗಲ್ಲ. ಸ್ಮಶಾನಕ್ಕೆ ಕಳುಹಿಸುವುದಾಗಿ ಕೈದಿಗಳು ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಕಾರಾಗೃಹದ ಪ್ರಭಾರ ಅಧೀಕ್ಷಕ ಶಿವಾನಂದ ಶಿವಪುರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.