ಮನೆಗೆ ನುಗ್ಗಿ ಮಹಿಳೆಯ ತಬ್ಬಿಕೊಂಡ!

7

ಮನೆಗೆ ನುಗ್ಗಿ ಮಹಿಳೆಯ ತಬ್ಬಿಕೊಂಡ!

Published:
Updated:

ಬೆಂಗಳೂರು: ‘ನೀರು ಕೇಳುವ ನೆಪದಲ್ಲಿ ಬಂದ ಯುವಕ, ತಬ್ಬಿಕೊಂಡು ಅನುಚಿತವಾಗಿ ವರ್ತಿಸಿದ್ದಾನೆ’ ಎಂದು ಆರೋಪಿಸಿ 23 ವರ್ಷದ ಗೃಹಿಣಿ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಆತನನ್ನು ಈ ಮೊದಲು ಕಾಮಾಕ್ಷಿಪಾಳ್ಯ ಮಾರ್ಕೆಟ್‌ನಲ್ಲಿ ನೋಡಿದ್ದೆ’ ಎಂದು ಸಂತ್ರಸ್ತೆ ಹೇಳಿಕೆ ಕೊಟ್ಟಿದ್ದು, ಪೊಲೀಸರು ಮಾರ್ಕೆಟ್ ಸುತ್ತಮುತ್ತ ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

‘ನಾವು 6 ತಿಂಗಳಿನಿಂದ ನಗರದಲ್ಲಿ ನೆಲೆಸಿದ್ದೇವೆ. ಪತಿ ಕೆಲಸಕ್ಕೆ ಹೋದರು. ನಾನು 3 ವರ್ಷದ ಮಗನೊಂದಿಗೆ ಕೋಣೆಯಲ್ಲಿದ್ದೆ. ಈ ವೇಳೆ ಕಿಟಕಿ ಬಡಿದ ಒಬ್ಬಾತ, ಕುಡಿಯಲು ನೀರು ಕೇಳಿದ’ ಎಂದು ಸಂತ್ರಸ್ತೆ ವಿವರಿಸಿದ್ದಾರೆ.

‘ನಾನು ನೀರು ಕೊಡಲು ಬಾಗಿಲು ತೆಗೆಯುತ್ತಿದ್ದಂತೆಯೇ ಏಕಾಏಕಿ ಒಳಗೆ ನುಗ್ಗಿದ ಆತ, ನನ್ನನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ. ನೆರವಿಗಾಗಿ ಕೂಗಿಕೊಂಡಾಗ ಬಾಯಿ ಮುಚ್ಚಿ ಮಾನಭಂಗಕ್ಕೆ ಯತ್ನಿಸಿದ. ಈ ವೇಳೆ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಓಡಿ ಬಂದೆ. ತಕ್ಷಣ ಆತನೂ ಹೊರಬಂದು ಓಡಲಾರಂಭಿಸಿದ.’

‘ರಕ್ಷಣೆಗೆ ಬಂದ ನೆರೆಯವರು, ಹಿಡಿಯಲು ಬೆನ್ನಟ್ಟಿದರಾದರೂ ಆತ ಸಿಗಲಿಲ್ಲ. ಮಗುವಿಗೆ ಏನಾದರೂ ಮಾಡಿಬಿಟ್ಟನಾ ಎಂಬ ಭಯವಾಗಿ ಕೂಡಲೇ ಮನೆಯೊಳಗೆ ಓಡಿದೆ. ಮಗು ಗಾಬರಿಯಿಂದ ಜೋರಾಗಿ ಅಳುತ್ತಿತ್ತು. ನಂತರ ಪತಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಆತನನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಹೇಳಿದ್ದಾರೆ.

ಹಿಂಬಾಲಿಸಿ ಬಂದಿರುವ ಸಾಧ್ಯತೆ

‘ಫಿರ್ಯಾದಿ ಮಹಿಳೆ ಬೆಳಿಗ್ಗೆ ಮನೆ ಸಮೀಪದ ಮಾರ್ಕೆಟ್‌ಗೆ ಹೋಗಿ ತರಕಾರಿ ತಂದಿದ್ದರು. ಈ ವೇಳೆ ಅವರನ್ನು ನೋಡಿರುವ ಆರೋಪಿ, ಹಿಂಬಾಲಿಸಿಕೊಂಡು ಬಂದು ಕೃತ್ಯ ಎಸಗಿರುವ ಸಾಧ್ಯತೆ ಇದೆ. ಮಾರ್ಕೆಟ್‌ನಿಂದ ಮನೆವರೆಗಿನ ಎಲ್ಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನೂ ಪರಿಶೀಲಿಸುತ್ತಿದ್ದೇವೆ. ಕೆಲ ವ್ಯಾಪಾರಿಗಳನ್ನೂ ವಿಚಾರಣೆ ನಡೆಸಿ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !