ಮಂಗಳವಾರ, ಜನವರಿ 21, 2020
28 °C

ಸರಗಳವು; ಮೆಟ್ಟಿಲಿನಿಂದ ಬಿದ್ದು ಮಹಿಳೆಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಆರ್.ಟಿ.ನಗರ ಠಾಣೆ ವ್ಯಾಪ್ತಿಯ ಗಿಡ್ಡಪ್ಪ ಬ್ಲಾಕ್‌ನಲ್ಲಿರುವ ಮನೆಯ ಮೆಟ್ಟಿಲು ಹತ್ತುತ್ತಿದ್ದಾಗಲೇ ನಿರ್ಮಲಾ (58) ಎಂಬುವರ ಚಿನ್ನದ ಸರವನ್ನು ಕಿತ್ತುಕೊಂಡು ದುಷ್ಕರ್ಮಿ ಪರಾರಿಯಾಗಿದ್ದಾನೆ. ಕೃತ್ಯದ ವೇಳೆಯೇ ಮೆಟ್ಟಿಲು ಮೇಲಿದ್ದ ಬಿದ್ದು ನಿರ್ಮಲಾ ಗಾಯಗೊಂಡಿದ್ದಾರೆ.

‘ಜ. 9ರಂದು ಮಧ್ಯಾಹ್ನ ಮೊಮ್ಮಗಳನ್ನು ಶಾಲೆಯಿಂದ ಕರೆದುಕೊಂಡು ಬಂದಿದ್ದ ನಿರ್ಮಲಾ, ಮನೆಯ ಎರಡನೇ ಮಹಡಿ ಮೆಟ್ಟಿಲು ಹತ್ತುತ್ತಿದ್ದರು. ಹೆಲ್ಮೆಟ್ ಧರಿಸಿ ಸ್ಥಳಕ್ಕೆ ಬಂದಿದ್ದ ಅಪರಿಚಿತ, ನಿರ್ಮಲಾ ಅವರ 40 ಗ್ರಾಂ ತೂಕದ ಸರ ಕಿತ್ತುಕೊಂಡು ಪರಾರಿಯಾದ. ಸರವನ್ನು ಜೋರಾಗಿ ಎಳೆದಿದ್ದರಿಂದ ನಿರ್ಮಲಾ ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಸರಗಳವು ಯತ್ನ: ಹೊರವರ್ತುಲ ರಸ್ತೆಯ ಐಟಿಐ ಲೇಔಟ್ ಬಳಿ ಶಾಂತಾ ಎಂಬುವರ ಸರ ಕಸಿದುಕೊಳ್ಳಲು ಯತ್ನಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

‘ನಾಯಂಡಹಳ್ಳಿ ನಿವಾಸಿ ಶಾಂತಾ ಭಾನುವಾರ ಬೆಳಿಗ್ಗೆ 8 ಗಂಟೆಗೆ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಸರ ಕಸಿಯಲು ಯತ್ನಿಸಿದ್ದರು. ತಪ್ಪಿಸಿಕೊಂಡು ದೂರ ಓಡಿಹೋಗಿದ್ದ ಶಾಂತಾ, ಕೂಗಾಡಿ ಜನರನ್ನು ಸೇರಿಸಿದ್ದರು. ಹೆದರಿದ ಆರೋಪಿಗಳು ಸ್ಥಳದಿಂದ ಪರಾರಿಯಾದರು’ ಎಂದು ಪೊಲೀಸರು ಹೇಳಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು