ಶನಿವಾರ, ಜುಲೈ 2, 2022
25 °C

ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಪತ್ನಿ ಹತ್ಯೆ; ಕೊಳೆತ ಸ್ಥಿತಿಯಲ್ಲಿ‌ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ವನಜಾಕ್ಷಿ (31) ಎಂಬುವರನ್ನು ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಅವರ ಪತಿ ಅಶೋಕನನ್ನು (37) ಪೊಲೀಸರು ಬಂಧಿಸಿದ್ದಾರೆ.

'ಏಪ್ರಿಲ್ 17ರಂದು ರಾತ್ರಿ ಕೊಲೆ ನಡೆದಿದೆ. ಕೊಳೆತ ಸ್ಥಿತಿಯಲ್ಲಿ‌ ಮೃತದೇಹ ಗುರುವಾರ ಪತ್ತೆ ಆಗಿದೆ' ಎಂದು ಪೊಲೀಸರು ತಿಳಿಸಿದರು.

'ಕಾರು ಚಾಲಕ‌ನಾಗಿ‌ ಕೆಲಸ‌ ಮಾಡುತ್ತಿದ್ದ ಅಶೋಕ, ಕೆಲ ವರ್ಷಗಳ ಹಿಂದೆ ವನಜಾಕ್ಷಿ ಅವರನ್ನು ಮದುವೆಯಾಗಿದ್ದ. ಕಾವೇರಿಪುರದಲ್ಲಿ ದಂಪತಿ ನೆಲೆಸಿದ್ದರು.'

'ಕೌಟುಂಬಿಕ ಕಾರಣಕ್ಕಾಗಿ ದಂಪತಿ‌ ನಡುವೆ ಆಗಾಗ ಜಗಳ‌ ಆಗುತ್ತಿತ್ತು. ಏಪ್ರಿಲ್ 17ರಂದು ಜಗಳ‌ ವಿಕೋಪಕ್ಕೆ ಹೋಗಿತ್ತು. ಪತ್ನಿಯನ್ನು ‌ಕೊಂದಿದ್ದ ಅಶೋಕ, ಮನೆಯೊಳಗೆ ಮೃತದೇಹವಿಟ್ಟು ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದ. ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಮನೆಗೆ ಹೋಗಿ ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ' ಎಂದೂ ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು