ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ಸಮಾನತೆಗೆ ಬೈಕ್ ಜಾಥಾ ನಡೆಸಿದ ಮಹಿಳೆಯರು

Last Updated 13 ಮಾರ್ಚ್ 2022, 21:36 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗ ಸಮಾನತೆ ಹಾಗೂ ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಮಹಿಳೆಯರು ನಗರದಲ್ಲಿ ಭಾನುವಾರ ಬೈಕ್ ಜಾಥಾ ನಡೆಸಿ, ಜಾಗೃತಿ ಮೂಡಿಸಿದರು.

ಮಾರತಹಳ್ಳಿಯ ರೈನ್‌ಬೋ ಮಕ್ಕಳ ಆಸ್ಪತ್ರೆಯು ‘ಮಿಡ್‌ನೈಟ್ ರೈಡ್ 2022’ ಶೀರ್ಷಿಕೆಯಡಿ ಹಮ್ಮಿಕೊಂಡ ಜಾಥಾಕ್ಕೆ ಆಸ್ಪತ್ರೆಯ ಅಧ್ಯಕ್ಷಡಾ. ರಮೇಶ್ ಕಂಚಾರ್ಲ, ನಟಿ ಮೇಘನಾ ರಾಜ್ ಮತ್ತು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಡಿ. ಮೌದ್ಗಿಲ್ ಚಾಲನೆ ನೀಡಿದರು.

‘ಸಮಾಜದಲ್ಲಿ ಸಮಾನತೆ ಮೂಡಿಸುವ ಅಗತ್ಯವಿದೆ. ಮಹಿಳೆಯರು ರಾತ್ರಿ ವೇಳೆ ಹೊರಗಡೆ ಸಂಚರಿಸಬಾರದು ಎನ್ನುವುದು ಸರಿಯಲ್ಲ. ಪುರುಷರು ಹೊರಗಡೆ ಸಂಚರಿಸಿದರೆ ಯಾರು ಅವರನ್ನು ಪ್ರಶ್ನಿಸುವುದಿಲ್ಲ. ಆದರೆ, ಮಹಿಳೆಯರಿಗೆ ನೂರೆಂಟು ಪ್ರಶ್ನೆ ಹಾಕಲಾಗುತ್ತದೆ.ಮಹಿಳೆಯರು ಯಾವುದೇ ಸ್ಥಳದಲ್ಲಿ ವಾಹನ ಚಲಾಯಿಸಬಹುದು ಎಂಬುದನ್ನು ಈ ಜಾಥಾ ತೋರಿಸಿಕೊಟ್ಟಿದೆ’ ಎಂದುಡಾ. ರಮೇಶ್ ಕಂಚಾರ್ಲ ತಿಳಿಸಿದರು.

‘ದೇಶದಲ್ಲಿ ಮಹಿಳೆಯರು ಸಂಜೆ ವೇಳೆ ಮನೆಯಿಂದ ಹೊರಗಡೆ ತೆರಳುವಾಗ ಪುರುಷರ ಅನುಮತಿ ಪಡೆಯಬೇಕಿದೆ. ಪುರುಷರಿಗೆ ಎಲ್ಲ ಸ್ವಾತಂತ್ರ್ಯ ಇರುವಾಗ ಮಹಿಳೆಯರಿಗೆ ಏಕೆ ನಿರ್ಬಂಧ’ ಎಂದುರೂಪಾ ಡಿ. ಮೌದ್ಗಿಲ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT