ಪೀಣ್ಯ ದಾಸರಹಳ್ಳಿ: ಸಿಡೇದಹಳ್ಳಿಯ ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್ ಕಾಲೇಜು ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ 4 ಕಿ.ಮೀ ವಾಕಥಾನ್ ಹಮ್ಮಿಕೊಳ್ಳಲಾಯಿತು.

ಸೌಂದರ್ಯ ಕಾಲೇಜಿನ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿದ್ದರು. ಎಂಟನೇ ಮೈಲಿ ಜಂಕ್ಷನ್ ಬಳಿ ಪ್ರಾರಂಭವಾಗಿ ಹೆಸರಘಟ್ಟ ಮುಖ್ಯ ರಸ್ತೆಯ ಮಾರ್ಗವಾಗಿ ಬೋನ್ಮಿಲ್ ಮೂಲಕ ಸಿಡೇದಹಳ್ಳಿಯ ಸೌಂದರ್ಯ ಕಾಲೇಜಿನಲ್ಲಿ ಮುಕ್ತಾಯವಾಯಿತು.

ಸೌಂದರ್ಯ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷ ಸೌಂದರ್ಯ ಪಿ.ಮಂಜಪ್ಪ, 'ಮಹಿಳಾ ಸಬಲೀಕರಣದ ಜಾಗೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ವಾಕಥಾನ್ ನಡೆಸಲಾಗುತ್ತಿದೆ' ಎಂದರು.

ಸೌಂದರ್ಯ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷ ಸೌಂದರ್ಯ ಪಿ. ಮಂಜಪ್ಪ, ಸಿಇಒ ಎಂ. ಕೀರ್ತನ್ ಕುಮಾರ್, ವ್ಯವಸ್ಥಾಪಕ ಟ್ರಸ್ಟಿಗಳಾದ ವರುಣ್ ಕುಮಾರ್ ಮತ್ತು ನಿಶ್ಮಿತಾ ವರುಣ್, ಸೌಂದರ್ಯ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಚ್ ಎಸ್, ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.