ಗುರುವಾರ , ನವೆಂಬರ್ 21, 2019
23 °C

ಖಾಸಗಿ ಅಂಗ ತೋರಿಸಿ ಪ್ರಚೋದನೆ

Published:
Updated:

ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ಯುವತಿಯನ್ನು ದುರುಗುಟ್ಟಿ ನೋಡಿದ್ದ ಯುವಕನೊಬ್ಬ ತನ್ನ ಖಾಸಗಿ ಅಂಗ ತೋರಿಸಿ ಪರಾರಿಯಾಗಿದ್ದು, ಆ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನ. 7ರಂದು ಸಂಜೆ ನಡೆದ ಘಟನೆ ಸಂಬಂಧ ಯುವತಿಯೇ ದೂರು ನೀಡಿದ್ದಾರೆ. ಬೈಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಲ್ಯಾವೆಲ್ಲೆ ವೃತ್ತದಲ್ಲಿ ಯುವತಿ ನಡೆದುಕೊಂಡು ಹೋಗುತ್ತಿದ್ದರು. ಬೈಕ್‌ನಲ್ಲಿ ಬಂದಿದ್ದ ಆರೋಪಿ ಯುವತಿಯ ಮುಂದೆ ಬೈಕ್ ನಿಲ್ಲಿಸಿ ದುರುಗುಟ್ಟಿ ನೋಡಿದ್ದ. ನಂತರ, ತನ್ನ ಖಾಸಗಿ ಅಂಗ ತೋರಿಸಿ ಲೈಂಗಿಕವಾಗಿ ಪ್ರಚೋದಿಸಿ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)