‘ತಾಕತ್ತಿದ್ದವರನ್ನು ಜಗತ್ತು ಒಪ್ಪಿಕೊಳ್ಳುತ್ತದೆ’: ಅನಂತಕುಮಾರ ಹೆಗಡೆ

7

‘ತಾಕತ್ತಿದ್ದವರನ್ನು ಜಗತ್ತು ಒಪ್ಪಿಕೊಳ್ಳುತ್ತದೆ’: ಅನಂತಕುಮಾರ ಹೆಗಡೆ

Published:
Updated:

ಬೆಂಗಳೂರು: ‘ತಾಕತ್ತಿದ್ದವನನ್ನು ಪೃಥ್ವಿ ಒಪ್ಪಿಕೊಳ್ಳುತ್ತೆ. ಕಲಿಕೆಯ ಮನದ ಬಾಗಿಲು ಮುಚ್ಚಿದಾಗ ಬದುಕು ಅಂತ್ಯವಾಗುತ್ತದೆ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ನಗರದ ಮಲ್ಲೇಶ್ಚರದ ಲೇಡಿಸ್ ಅಸೋಷಿಯೇಷನ್ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭವಿಷ್ಯದಲ್ಲಿ ಬಲಾಢ್ಯ ವ್ಯವಸ್ಥೆ, ಸವಾಲುಗಳನ್ನು ಸ್ವೀಕರಿಸಿ ಬದುಕುವುದೇ ಕೌಶಲ. ಗುಲಾಮರಾಗದೆ, ಕಂಡ ಕನಸಿಗೆ ಏಣಿ ಹಾಕಿ, ಗೆಲ್ಲಲಿಕ್ಕಾಗಿಯೇ ಬದುಕಬೇಕು' ಎಂದರು.

‘ಅಂತರಂಗ ಅರಿಯುವ ಎದೆಗಾರಿಕೆ ಬೇಕು. ಅಂತರಂಗದ ಸಂವಹನ ನಡೆದಾಗ ನಿಜವಾದ ಗುರು ಶಿಷ್ಯರ ನಡುವಿನ ಸಂಬಂಧ ಏರ್ಪಡುತ್ತದೆ. ಸ್ವಾಭಿಮಾನದಿಂದ ಬದುಕಿ ಮುನ್ನಡೆಯಿರಿ' ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 17

  Happy
 • 2

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !