ಭಾನುವಾರ, ಅಕ್ಟೋಬರ್ 2, 2022
21 °C

ಅಕ್ಟೋಬರ್‌ನಲ್ಲಿ ಬೆಂಗಳೂರಿಗೆ ಅತಿ ದೊಡ್ಡ ವಿಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ವಿಶಾಲವಾದ ಪ್ರಯಾಣಿಕ ವಿಮಾನ ಎ– 380 ಶೀಘ್ರದಲ್ಲೇ ಬೆಂಗಳೂರಿಗೆ ಬರಲಿದೆ. ಅಕ್ಟೋಬರ್ 30ರಿಂದ ಎಮಿರೆಟ್ಸ್‌ ಜಂಬೊ ಜೆಟ್‌(79.8 ಮೀಟರ್‌ ಉದ್ದ) ವಿಮಾನ ದುಬೈ ಮತ್ತು ಬೆಂಗಳೂರು ನಡುವೆ ಸಂಚರಿಸಲಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಡ್‌ ‘ಎಫ್‌’ಗೆ ಅನುಗುಣವಾಗಿ ಈ ವಿಮಾನ ಇಳಿಸುವ ರನ್‌ವೇ ಅಣಿಗೊಳಿಸಲಾಗುತ್ತಿದೆ. ದುಬೈನಿಂದ ಅಕ್ಟೋಬರ್ 30ರ ರಾತ್ರಿ 9.25 ಹೊರಟು ಬೆಂಗಳೂರಿಗೆ ಬೆಳಗಿನ ಜಾವ 2.30ರ ಸುಮಾರಿಗೆ ಬರಲಿದೆ.

ಬೋಯಿಂಗ್ ಪ್ರಯಾಣಿಕರ ವಿಮಾನ ಮಾತ್ರ ‘ಎಫ್’ ಕೋಡ್ ಹೊಂದಿದ್ದ ಪ್ರಯಾಣಿಕ ವಿಮಾನವಾಗಿತ್ತು. ಎ 380 ಡಬಲ್ ಡೆಕರ್ ವಿಮಾನವಾಗಿದ್ದು, ಇದರಲ್ಲಿ 500ಕ್ಕೂ ಹೆಚ್ಚು ಜನ ಪ್ರಯಾಣಿಸಬಹುದು. ಮುಂಬೈ ಮತ್ತು ದೆಹಲಿ ಬಿಟ್ಟರೆ ಜಂಬೊ ಜೆಟ್ ವಿಮಾನ ಸಂಚಾರಕ್ಕೆ ಸಾಕ್ಷಿಯಾಗಲಿರುವ ದೇಶದ ಮೂರನೇ ನಗರ ಬೆಂಗಳೂರು ಎನಿಸಿಕೊಳ್ಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು