ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಭಾಷಾಂತರ: ಆಕ್ರೋಶ

Last Updated 9 ಜೂನ್ 2019, 19:05 IST
ಅಕ್ಷರ ಗಾತ್ರ

ಬೆಂಗಳೂರು:ಬೆಂಗಳೂರು ವಿಮಾನ ನಿಲ್ದಾಣದ ಸೂಚನಾ ಫಲಕಗಳಲ್ಲಿನ ಸಾಲುಗಳನ್ನು ತಪ್ಪಾಗಿ ಭಾಷಾಂತರಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೂಗಲ್‌ ಭಾಷಾಂತರವನ್ನು ನಂಬುವ ಬದಲು, ಉತ್ತಮ ಭಾಷಾಂತರಕಾರರನ್ನಾದರೂ ನೇಮಿಸಿಕೊಳ್ಳಿ ಎಂದು ಕೆಲವರು ಟ್ವೀಟ್‌ ಮೂಲಕ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಸಲಹೆಯನ್ನೂ ನೀಡಿದ್ದಾರೆ.

‘ಮೀಸಲಿರಿಸಿದ ಅಥವಾ ಕಾಯ್ದಿರಿಸಿದ’ ಎಂದು ಭಾಷಾಂತರ ಮಾಡಬಹುದಾಗಿದ್ದ ‘Reserved Pick-up' ಪದವನ್ನು, ‘ಮೀಸಲಾದ ಏರಿಕೆ’ ಎಂದು ಬರೆಯಲಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಾಬು ಅಜಯ್‌ ಎಂಬುವರು, ಸಂಬಂಧಪಟ್ಟವರು ಇತ್ತ ಗಮನ ಹರಿಸಲಿ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT