ಬೆಂಗಳೂರು: ಧರ್ಮ ಮತ್ತು ಸಂಸ್ಕೃತಿ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಇತ್ತೀಚೆಗೆ ಸಮಾಜದಲ್ಲಿ ಧರ್ಮವನ್ನು ಮರೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಧರ್ಮ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಮಾಗಡಿ ರಸ್ತೆಯ ನೈಸ್ ರಸ್ತೆ ಸಮೀಪದ ಎಲೆಕೊಡಿಗೇಹಳ್ಳಿಯಲ್ಲಿ ಯಜಮಾನರು ಡಾ.ಎನ್.ನಂಜುಂಡೇಶ್ವರ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಚೋಳರ ಕಾಲದ ಇತಿಹಾಸ ಪ್ರಸಿದ್ಧ `ಶ್ರೀನಂದಿಬಸವೇಶ್ವರಸ್ವಾಮಿ, ಪಂಚಮುಖ ಶಂಭುಲಿಂಗೇಶ್ವರ, ಮಹಾಗಣಪತಿ ನೂತನ ದೇವಾಲಯದ ಲೋಕಾರ್ಪಣೆ ಮತ್ತು ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಆಚಾರ–ವಿಚಾರ ಸಂಸ್ಕೃತಿ ಉಳಿಯಬೇಕಾದರೆ, ನಾವು ನಮ್ಮ ಧರ್ಮವನ್ನು ಗೌರವಿಸಬೇಕು. ಸಂಸ್ಕೃತಿ ಉಳಿವಿಗೆ ಮಠಾಧಿಪತಿಗಳ ಮಾರ್ಗದರ್ಶನ ಅಗತ್ಯ. ಧಾರ್ಮಿಕ ಆಚರಣೆಗಳತ್ತ ಮಾನವ ವಿಕಸಿತನಾಗಬೇಕು. ಧಾರ್ಮಿಕ ನೆಲೆಗಟ್ಟಿನಲ್ಲಿ ಸಮಾಜ ನಿರ್ಮಾಣವಾಗಬೇಕು. ಆಗ ಮಾತ್ರ ಸುಖ ಶಾಂತಿ ಸಮದ್ಧಿಯ ಸಮಾಜ ನಿರ್ಮಾಣವಾಗುತ್ತದೆ’ ಎಂದು ಹೇಳಿದರು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಮಹಾಸಂಸ್ಥಾನದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಸ್.ಟಿ. ಸೋಮಶೇಖರ್, ಎಲೆಕೊಡಿಗೇಹಳ್ಳಿಯ ಯಜಮಾನರಾದ ಡಾ. ಎನ್. ನಂಜುಂಡೇಶ್ವರ, ನೈಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ, ಅಶೋಕ್ ಖೇಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.