ಗುರುವಾರ , ಸೆಪ್ಟೆಂಬರ್ 23, 2021
28 °C

ಬೆಂಗಳೂರು: ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH Photo

ಬೆಂಗಳೂರು: ನಗರದ ಯಕ್ಷಸಿಂಚನ ಟ್ರಸ್ಟ್ ಯಕ್ಷಗಾನ ಸಾಹಿತ್ಯಾಸಕ್ತರಿಗಾಗಿ ‌ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆ ಏರ್ಪಡಿಸಿದೆ.

ವಿಜೇತರಿಗೆ ₹10 ಸಾವಿರ (ಪ್ರಥಮ), ₹5 ಸಾವಿರ (ದ್ವಿತೀಯ) ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ನೀಡಲಾಗುವುದು. 

ಪ್ರಸಂಗವು ಪೌರಾಣಿಕ ಪ್ರಸಂಗವಾಗಿರಬೇಕು. ಕಥೆಯ ಎಳೆ ಯಾವುದಾದರೂ ಪುರಾಣಗಳಲ್ಲಿ ದಾಖಲಾಗಿರಬೇಕು. ಉತ್ತಮ ಗುಣಮಟ್ಟದ ಪ್ರಸಂಗವನ್ನು ಯಕ್ಷಗಾನ ಪ್ರಸಂಗಕೋಶದಲ್ಲಿ ಪ್ರಕಟಿಸಲಾಗುವುದು. ಅಂಚೆ ಅಥವಾ ಇಮೇಲ್ ಮೂಲಕ ಪ್ರಸಂಗವನ್ನು ತಲುಪಿಸಬೇಕು.

ಪ್ರಸಂಗ ರಚನೆಗೆ 4 ತಿಂಗಳ ಕಾಲಾವಕಾಶ ನೀಡಲಾಗುವುದು. ಸ್ಪರ್ಧೆಯು ಆಗಸ್ಟ್ 1ರಿಂದ ಆರಂಭಗೊಂಡು ನವೆಂಬರ್ 30ಕ್ಕೆ ಮುಕ್ತಾಯಗೊಳ್ಳುತ್ತದೆ. ಆಸಕ್ತರು ಸೆಪ್ಟೆಂಬರ್ 1ರೊಳಗೆ ನೋಂದಣಿ ಮಾಡಿಕೊಳ್ಳಬೇಕು.

ಸ್ಪರ್ಧಿಗಳು ತಮ್ಮ ವಿವರಗಳನ್ನು ಇಮೇಲ್ ವಿಳಾಸ sinchana.yaksha@gmail.com ಅಥವಾ ಸಂಸ್ಥೆಯ ವಿಳಾಸಕ್ಕೆ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ:ಯಕ್ಷಸಿಂಚನ ಟ್ರಸ್ಟ್‌, ವಾಸ್ತು ಗ್ರೀನ್ಸ್‌, ಕೋಡಿಪಾಳ್ಯ ಮುಖ್ಯರಸ್ತೆ, ಬೆಂಗಳೂರು.

ಸಂಪರ್ಕ:9986384205, 9986363495


ನಾಳೆಯಿಂದ ‘ನನ್ನ ಭಾರತ’ ಅಭಿಯಾನ

ಬೆಂಗಳೂರು: ದಿಶಾ ಭಾರತ್ ಸಂಸ್ಥೆಯು ಸ್ವಾತಂತ್ರ್ಯ ದಿನದ ಅಂಗವಾಗಿ ಆಗಸ್ಟ್ 1 ರಿಂದ 15ರವರೆಗೆ ‘ನನ್ನ ಭಾರತ’ ಎಂಬ ರಾಷ್ಟ್ರಮಟ್ಟದ ಯುವ ಅಭಿಯಾನವನ್ನು ಆನ್‌ಲೈನ್‌ ಮೂಲಕ ಹಮ್ಮಿಕೊಂಡಿದೆ.

ಪ್ರತಿದಿನ ಬೆಳಗ್ಗೆ 11 ಗಂಟೆಯಿಂದ ವಿದ್ಯಾರ್ಥಿಗಳಿಂದ ದೇಶಭಕ್ತಿ ಕಾರ್ಯಕ್ರಮ, ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕಥಾಮಾಲಿಕೆ, ರಾಷ್ಟ್ರೀಯ ವಿಚಾರಗಳ ಕುರಿತು ಭಾಷಣ, ದೇಶಭಕ್ತಿ ಗೀತೆಗಳ ಗಾಯನ, ಸಾಮಾಜಿಕ ವಿಷಯಗಳ ಕುರಿತು ಏಕಪಾತ್ರಾಭಿನಯ, ರಾಷ್ಟ್ರಭಾವ ಜಾಗರಣದ ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಸಂಜೆ 6ಕ್ಕೆ ಉಪನ್ಯಾಸ ಸರಣಿ ಇರಲಿದೆ.

ಆಗಸ್ಟ್‌ 1ರಂದು ಸಂಜೆ 6ಕ್ಕೆ ಉಪನ್ಯಾಸ ಸರಣಿಯ ಉದ್ಘಾಟನಾ ಭಾಷಣವನ್ನು ನವದೆಹಲಿಯ ಡಾ.ಅನಿರ್ಬನ್ ಗಂಗೂಲಿ ಮಾಡಲಿದ್ದಾರೆ. ಆಗಸ್ಟ್ 15ರ ಸಮಾರೋಪ ಭಾಷಣದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾಡಲಿದ್ದಾರೆ.

ಅಭಿಯಾನದ ಎಲ್ಲ ಕಾರ್ಯಕ್ರಮಗಳು ದಿಶಾ ಭಾರತ್ ಫೇಸ್‍ಬುಕ್ ಪುಟ www.facebook.com/DishaBharat ಮೂಲಕ ನೇರ ಪ್ರಸಾರವಾಗಲಿದೆ.

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ:ಅಭಿಯಾನದ ಅಂಗವಾಗಿ ‘ಸ್ವರಾಜ್ಯ-75: ಸ್ವಾತಂತ್ರ್ಯಾ ನಂತರದ ಭಾರತ’ ಕುರಿತು ಪ್ರಬಂಧ ಸ್ಪರ್ಧೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏರ್ಪಡಿಸಲಾಗಿದೆ. ಶಾಲೆ ಮತ್ತು ಕಾಲೇಜು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 2,500 ಪದಮಿತಿಯಲ್ಲಿ ಬರೆದ ಪ್ರಬಂಧವನ್ನು ಆಗಸ್ಟ್‌ 15ರೊಳಗೆ ಸಂಸ್ಥೆಯ ವಿಳಾಸಕ್ಕೆ ತಲುಪಿಸುವಂತೆ ಪ್ರಕಟಣೆ ತಿಳಿಸಿದೆ.

ವಿಳಾಸ:ಈಸ್ಟ್ ವೆಸ್ಟ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಿ.ಇ.ಎಲ್ ಬಡಾವಣೆ, ವಿಶ್ವನೀಡಂ ಅಂಚೆ, ಅಂಜನಾನಗರ, ಬೆಂಗಳೂರು 

ಸಂಪರ್ಕ:9483150527, 8861938180
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.