ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview: ಯಲಹಂಕ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

Published 4 ಮೇ 2023, 4:22 IST
Last Updated 4 ಮೇ 2023, 4:22 IST
ಅಕ್ಷರ ಗಾತ್ರ

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ಯಲಹಂಕ ಸಹ ಒಂದು. ಬಿಜೆಪಿಯಿಂದ ಎಸ್‌.ಆರ್‌.ವಿಶ್ವನಾಥ್‌ ಸ್ಪರ್ಧಿಸುತ್ತಿದ್ದು, ಅವರ ಜೊತೆ ವರದಿಗಾರ ಸಚ್ಚಿದಾನಂದ ಕುರಗುಂದ ನಡೆಸಿದ ಸಂದರ್ಶನ ಇಲ್ಲಿದೆ.

ನೀವು ಏನು ಕೆಲಸಗಳನ್ನು ಮಾಡುತ್ತೀರಿ ಎನ್ನುವುದಕ್ಕಾಗಿ ಜನರು ನಿಮಗೆ ಮತ ನೀಡಬೇಕು?

ಕಳೆದ 40 ವರ್ಷಗಳಿಂದಲೂ ಕ್ಷೇತ್ರದಲ್ಲಿದ್ದುಕೊಂಡು, ಜನರ ಒಡನಾಟದಲ್ಲಿದ್ದೇನೆ. ಕ್ಷೇತ್ರದ ಜನರ ಜತೆ ನಿಕಟ ಸಂಪರ್ಕದಲ್ಲಿದ್ದು, ಎಲ್ಲರಿಗೂ  ಲಭ್ಯವಾಗುತ್ತೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಜಿಲ್ಲಾ ಪಂಚಾಯಿತಿ ಸದಸ್ಯ, ಶಾಸಕನಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಬಾಕಿ ಉಳಿದಿರುವ ಕಾರ್ಯಗಳನ್ನು ಏನೇನು ಎನ್ನುವುದು ಸಹ ನನಗೆ ಚೆನ್ನಾಗಿ ಗೊತ್ತಿದೆ. ಅವುಗಳನ್ನು ಮುಂದಿನ ಅವಧಿಯಲ್ಲಿ ಕೈಗೊಳ್ಳುವ ಆಶಾಭಾವ ಹೊಂದಿದ್ದೇನೆ. ಹೀಗಾಗಿ, ಕ್ಷೇತ್ರದ ಸಂಪೂರ್ಣ ನಾಡಿಮಿಡಿತ ನನಗೆ ಗೊತ್ತಿದೆ. ಜಲ ಜೀವನ್‌ ಮಿಷನ್‌ ಮೂಲಕ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಲಾಗಿದ್ದು, ಮನೆ, ಮನೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ವಸತಿ ರಹಿತರಿಗೆ ಮನೆ ನೀಡಲಾಗಿದೆ. ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ಭೂಸ್ವಾಧೀನ ವಿಷಯದಲ್ಲಿ ತಪ್ಪು ಅಭಿಪ್ರಾಯ ಮೂಡಿಸಲಾಗಿತ್ತು. ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟು ಗೊಂದಲಗಳನ್ನು ಪರಿಹರಿಸಿದ್ದೇನೆ. ರೈತರಿಗೆ ಅನ್ಯಾಯವಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿನ ಎಲ್ಲ ವರ್ಗದ ಮತ್ತು ಪ್ರದೇಶಗಳ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಿರುವ ತೃಪ್ತಿ ಇದೆ.

ಈ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ಮೂಡಿಸುವಷ್ಟು ಜನಬೆಂಬಲ ಇದೆಯೇ?

ಜನಬೆಂಬಲ ಉತ್ತಮವಾಗಿದೆ. ಕಳೆದ ಮೂರು ಬಾರಿ ಶಾಸಕನಾಗಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಲಿವೆ.

ಈ ಚುನಾವಣೆಯಲ್ಲಿ ನಿಮ್ಮ ನಿಜವಾದ ಎದುರಾಳಿ ಯಾರು?

ನನಗೆ ಯಾರೂ ಸಮೀಪದ ಸ್ಪರ್ಧಿಗಳು ಇಲ್ಲ. ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಕಣದಲ್ಲಿ 20 ಮಂದಿ ಇದ್ದರೂ ಅವರು ಸಮೀಪದ ಸ್ಪರ್ಧಿಗಳು ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT