ಬುಧವಾರ, ನವೆಂಬರ್ 20, 2019
27 °C

‘ಕ್ರೆಸಿಂಡೊ’ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

Published:
Updated:
Prajavani

ಯಲಹಂಕ: ಹೆಬ್ಬಾಳ ಕೆಂಪಾಪುರದ ಸಿಂಧಿ ಕಾಲೇಜಿನಲ್ಲಿ ಆಯೋಜಿಸಿರುವ ‘ಕ್ರೆಸಿಂಡೊ-2019’ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಿತ್ರ ನಿರ್ದೇಶಕ ಸಂತೋಷ್‌ ಆನಂದರಾಮ್‌ ಚಾಲನೆ ನೀಡಿದರು.

‘ನಿಮ್ಮಲ್ಲಿರುವ ಪ್ರತಿಭೆಯನ್ನು ನೀವೇ ಗುರುತಿಸಿಕೊಂಡು ದೊಡ್ಡ ಕನಸುಗಳನ್ನು ಕಾಣಬೇಕು. ಅದನ್ನು ಸಾಕಾರಗೊಳಿಸಲು ಶ್ರದ್ಧೆಯಿಂದ ಪ್ರಯತ್ನಿಸಬೇಕು’ ಎಂದು ಸಂತೋಷ್ ಸಲಹೆ ನೀಡಿದರು.

ಸಿಂಧಿ ಸೇವಾಸಮಿತಿಯ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ನಗರದ 150ಕ್ಕೂ ಹೆಚ್ಚು ಕಾಲೇಜುಗಳ ಸುಮಾರು 1,500 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಫ್ಯಾಷನ್ ಷೋ, ಮೆಹಂದಿ, ಸಮೂಹನೃತ್ಯ, ಜೋಡಿ ನೃತ್ಯ, ಚರ್ಚಾ ಸ್ಪರ್ಧೆ, ಛಾಯಾಗ್ರಹಣ, ರಸಪ್ರಶ್ನೆ ಸೇರಿದಂತೆ 45 ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರಾಂಶುಪಾಲ ಡಾ.ಬಿ.ಎಸ್.ಶ್ರೀಕಂಠ,  ಚಿತ್ರನಟ ವಿನಾಯಕ ಜೋಶಿ, ನಟಿ ನಯನಾ ಪುಟ್ಟಸ್ವಾಮಿ, ಸಿಂಧಿ ಸೇವಾ ಸಮಿತಿಯ ಅಧ್ಯಕ್ಷ ಮದನ್ ದೌಲತ್‌ರಾಂ, ಸಿಂಧಿ ಕಾಲೇಜು ಅಧ್ಯಕ್ಷ ಪ್ರಕಾಶ್ ನಾರಂಗ್ ಇದ್ದರು.

 

ಪ್ರತಿಕ್ರಿಯಿಸಿ (+)