ಯಲಹಂಕ: ಯಲಹಂಕದ ವಹ್ನಿಕುಲ ಕ್ಷತ್ರಿಯ ಆರಾಧ್ಯದೇವಿ ಮಹೇಶ್ವರಮ್ಮನವರ ಹೂವಿನ ಕರಗ ಮಹೋತ್ಸವ ಹಾಗೂ ವಿವಿಧ ದೇವರುಗಳ ಪಲ್ಲಕ್ಕಿ ಉತ್ಸವ ಈಚೆಗೆ ವಿಜೃಂಭಣೆಯಿಂದ ನಡೆಯಿತು.

ಬಜಾರ್ ರಸ್ತೆಯಲ್ಲಿರುವ ಮಹೇಶ್ವರಮ್ಮನವರ ದೇವಾಲಯದಿಂದ ಹೊರಟ ಹೂವಿನ ಕರಗ, ಕೋಟೆಬೀದಿ, ಬೆಸ್ತರಬೀದಿ, ಕಾಮಾಕ್ಷಮ್ಮ ಬಡಾವಣೆ, ಹೊಸಬೀದಿ, ಗಾಂಧಿನಗರ, ಮನವರ್ತಿ ತೋಟ, ಡೌನ್ಬಜಾರ್ರಸ್ತೆ, ಮಾರುತಿನಗರ ಹಾಗೂ ವೆಂಕಟಾಲ ಮತ್ತಿತರ ಬಡಾವಣೆಗಳಲ್ಲಿ ಸಂಚರಿಸಿ ಮತ್ತೆ ದೇವಾಲಯಕ್ಕೆ ಆಗಮಿಸಿತು.

ಕರಗ ಮನೆಗಳ ಮುಂದೆ ಬಂದಾಗ ಮಹಿಳೆಯರು ಆರತಿ ಬೆಳಗಿ ಹೂವಿನ ಅರ್ಚನೆಮಾಡಿ ಸ್ವಾಗತಿಸಿದರು. ಸುತ್ತಮುತ್ತಲ ಗ್ರಾಮಗಳ 24 ದೇವರಿಂದ ಅಲಂಕೃತಗೊಂಡಿದ್ದ ಪಲ್ಲಕ್ಕಿ ಉತ್ಸವ, ಕರಗ ಮಹೋತ್ಸವಕ್ಕೆ ವಿಶೇಷ ಮೆರುಗು ನೀಡಿತು.

ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಕರಗ ವೀಕ್ಷಿಸಿದರು. ಅಯ್ಯಪ್ಪ ಅವರು 6ನೇ ಬಾರಿಗೆ ಕರಗ ಹೊತ್ತಿದ್ದರು. ಕರಗ ಮಹೋತ್ಸವ ಪ್ರಯುಕ್ತ ಕೆರೆ ಆವರಣದ ಕರಗಮಂಟಪವನ್ನು ಹೂವು, ದೀಪಗಳಿಂದ ಅಲಂಕರಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-4-2014816307

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.