ಯಲಹಂಕ: ಕೆಬಿಜಿ ಸ್ವಯಂ ಸೇವಕರ ಸಂಘ ಹಾಗೂ ವಾಸವಿ ಕಾಂಡಿಮೆಂಟ್ಸ್ ಸಹಯೋಗದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ನೇತೃತ್ವದಲ್ಲಿ ಸಹಕಾರನಗರದ ಗಣೇಶ ಮೈದಾನದಲ್ಲಿ ಮೇ 15ರಿಂದ 17ರವರೆಗೆ ಆಯೋಜಿಸಿರುವ ‘ಮ್ಯಾಂಗೊ ಉತ್ಸವ’ಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಉತ್ಸವದಲ್ಲಿ ತಾಜಾ ಮಾವಿನ ಹಣ್ಣುಗಳು, ಜ್ಯೂಸ್, ಮಿಲ್ಕ್ ಶೇಕ್, ಡೆಸರ್ಟ್, ಮ್ಯಾಂಗೊ ಕುನಾಫ, ಮ್ಯಾಂಗೊ ಹೋಳಿಗೆ, ಮ್ಯಾಂಗೊ ಚಿತ್ರಾನ್ನ, ಹಲಸಿನ ಹಣ್ಣಿನ ಬಿರಿಯಾನಿ, ಮ್ಯಾಂಗೊ ಸ್ಯಾಂಡ್ವಿಚ್, ಮ್ಯಾಂಗೊ ಕೇಸರಿ ಬಾತ್, ಮ್ಯಾಂಗೊ ರಸಂ ರೈಸ್ ಸೇರಿದಂತೆ ಮಾವಿನಿಂದ ತಯಾರಿಸಿದ 100ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ಒಂದೇ ಸೂರಿನಡಿಯಲ್ಲಿ ಸವಿಯಲು ವ್ಯವಸ್ಥೆ ಮಾಡಲಾಗಿದೆ.

ಉತ್ಸವದ ಅಂಗವಾಗಿ ಲೈವ್ ಸಂಗೀತ ಕಾರ್ಯಕ್ರಮ, ಪರ್ವ ಬ್ಯಾಂಡ್ ತಂಡದವರಿಂದ ಭಜನ್ ಜಮ್ಮಿಂಗ್, ಐಪಿಎಲ್ ಲೈವ್ ಸ್ಕ್ರೀನಿಂಗ್ ಹಾಗೂ ಮಕ್ಕಳ ಮನರಂಜನೆಗಾಗಿ ವಿವಿಧ ಆಟಿಕೆಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 11ರಿಂದ ರಾತ್ರಿ 10 ಗಂಟೆಯವರೆಗೆ ಉತ್ಸವ ನಡೆಯಲಿದೆ.

ಸಾರ್ವಜನಿಕರ ಮನರಂಜನೆಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-4-1159270413

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.