ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕ | ರಸ್ತೆ ಅಭಿವೃದ್ಧಿ: ₹30 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

Last Updated 28 ಅಕ್ಟೋಬರ್ 2022, 21:15 IST
ಅಕ್ಷರ ಗಾತ್ರ

ಯಲಹಂಕ: ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಇಲ್ಲಿನ 5 ಬಿಬಿಎಂಪಿ ವಾರ್ಡ್‌ಗಳ ವ್ಯಾಪ್ತಿಯಲ್ಲಿ ₹30 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆಗಳ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಅವರು ನಾಗೇನಹಳ್ಳಿ ಗೇಟ್ ಸಮೀಪದಲ್ಲಿ ಚಾಲನೆ ನೀಡಿದರು.

ದೊಡ್ಡಬಳ್ಳಾಪುರ ಮುಖ್ಯರಸ್ತೆಯ ನಾಗೇನಹಳ್ಳಿ ಗೇಟ್‌ನಿಂದ ಪ್ರೆಸಿಡೆನ್ಸಿ ಶಾಲೆಯವರೆಗೆ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ, ರೈಲ್ವೆ ಗೇಟ್‌ನಿಂದ ಇಸ್ರೋ ಬಡಾವಣೆಯವರೆಗೆ ರಸ್ತೆ ಡಾಂಬರೀಕರಣ, ಗಂಟಿಗಾನಹಳ್ಳಿ ಮುಖ್ಯರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ, ಕೋಗಿಲು ಮುಖ್ಯರಸ್ತೆಯ ಬಳ್ಳಾರಿ ಮುಖ್ಯರಸ್ತೆಯಿಂದ ಮಾರುತಿನಗರದ ವರೆಗಿನ ವೈಟ್ ಟಾಪಿಂಗ್ ಕಾಮಗಾರಿ ಹಾಗೂ ಉಪನಗರದ ಶಾರದಾನಗರ-ಮಾತೃ ಬಡಾವಣೆ, ನ್ಯಾಯಾಂಗ ಬಡಾವಣೆ, ಹಳೇನಗರದ ಡೌನ್ ಬಜಾರ್, ಚೌಡೇಶ್ವರಿ ದೇವಸ್ಥಾನದಿಂದ ಕೊಂಡಪ್ಪ ಬಡಾವಣೆಯವರೆಗಿನ ಮುಖ್ಯರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ’ಕಳೆದ ಹಲವು ದಿನಗಳಿಂದ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿವೆ. ಇದಕ್ಕೆ ಪರಿಹಾರವಾಗಿ ಮುಖ್ಯಮಂತ್ರಿಗಳು ₹8 ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ‘ ಎಂದು ತಿಳಿಸಿದರು.

ಇದರ ಭಾಗವಾಗಿ ಮೊದಲ ಹಂತದಲ್ಲಿ ವಾರ್ಡ್‌ ಮಟ್ಟದಲ್ಲಿ ಕಾಮಗಾರಿಗಳು ಚಾಲನೆಯಲ್ಲಿದ್ದು, ಪ್ರಮುಖ ರಸ್ತೆಗಳ ಕಾಮಗಾರಿ ಬಾಕಿಯಿತ್ತು. ಮಳೆ ಬಿಡುವು ನೀಡಿರುವುದರಿಂದ ಗ್ರಾಮದಿಂದ-ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಎರಡು ತಿಂಗಳ ಅವಧಿಯೊಳಗೆ ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿವೆ ಎಂದರು.

ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಚ್.ಬಿ.ಹನುಮಯ್ಯ, ಎಂ.ಸತೀಶ್, ಡಾ.ಶಶಿಕುಮಾರ್, ಡಿ.ಜಿ.ಅಪ್ಪಯಣ್ಣ, ಸಿ.ವೆಂಕಟೇಶ್, ಆವಲಹಳ್ಳಿ ಕೇಶವಮೂರ್ತಿ, ನಾಗೇನಹಳ್ಳಿ ಶಿವಕುಮಾರ್, ವಿ.ವಿ.ರಾಮಮೂರ್ತಿ, ವಿ.ಎಂ.ಚಂದ್ರಯ್ಯ, ಕಾರ್ಯಪಾಲಕ ಎಂಜಿನಿಯರ್ (ರಸ್ತೆ, ಮೂಲಭೂತ ಸೌಕರ್ಯ) ಪುನೀತ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಣ್ಣ, ಸಹಾಯಕ ಎಂಜಿನಿಯರ್ ವರುಣ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT