ಬೆಂಗಳೂರು: ಎಸ್ಐಆರ್ ಅಂದರೆ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲ. ಮತದಾರರನ್ನು ತೆಗೆದು ಹಾಕುವ ಉದ್ದೇಶದೊಂದಿಗೆ ತಯಾರು ಮಾಡುವ ಹೊಸ ಪಟ್ಟಿ ಎಂದು ಭಾರತ್ ಜೋಡೊ ಅಭಿಯಾನದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಹೇಳಿದರು.

ಜಾಗೃತ ಕರ್ನಾಟಕ ಮತ್ತು ಭಾರತ್ ಜೋಡೊ ಅಭಿಯಾನವು ಶನಿವಾರ ಹಮ್ಮಿಕೊಂಡಿದ್ದ ‘ಎಸ್ಐಆರ್: 13 ರಾಜ್ಯಗಳಲ್ಲಿ ಏನಾಗಿದೆ? ಕರ್ನಾಟಕದಲ್ಲಿ ಏನು ಮಾಡಬೇಕಿದೆ?’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ದೇಶ’, ‘ಕಾಲ’, ‘ಪಾತ್ರ’ ಈ ಮೂರು ಅಂಶಗಳನ್ನು ಮುಂದಿಟ್ಟುಕೊಂಡು ನಿಭಾಯಿಸಲಾಗುತ್ತಿದೆ. ಅದರಲ್ಲಿ ಮೊದಲನೆಯದು ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ. ಅದರ ಆಧಾರದಲ್ಲಿ ಲೋಕಸಭೆಯ ಸ್ಥಾನಗಳನ್ನು ಬದಲಿಸುವುದು. ಬಿಜೆಪಿಗೆ ಸವಾಲು ಇರುವ ರಾಜ್ಯಗಳಲ್ಲಿ ಸ್ಥಾನಗಳು ಕಡಿಮೆಯಾಗುತ್ತವೆ. ಉತ್ತರ ಭಾರತದ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ವಿಪರೀತ ಹೆಚ್ಚಳವಾಗಲಿದೆ’ ಎಂದರು.

ಎರಡನೆಯದು ‘ಕಾಲ’. ಇದು ಚುನಾವಣೆಗೆ ಸಂಬಂಧಿಸಿದ್ದು. ದೇಶದಲ್ಲಿ ಒಂದಲ್ಲ ಒಂದು ರಾಜ್ಯದಲ್ಲಿ ಪ್ರತಿವರ್ಷ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಪ್ರತಿಬಾರಿ ಚುನಾವಣೆ ಗೆಲ್ಲಲು ಏನಾದರೂ ಗಿಮಿಕ್ ಮಾಡುತ್ತಿರಬೇಕಾಗುತ್ತದೆ. ಅದು ಮೋದಿಗೆ ಬೇಡ. ಅವರು ಐದು ವರ್ಷಕ್ಕೆ ಒಂದೇ ಬಾರಿ ಚುನಾವಣೆ ಬಯಸುತ್ತಾರೆ. ಒಂದು ದೇಶ–ಒಂದು ಚುನಾವಣೆ ಅಂದರೆ ಇದು. ಬಾಲಾಕೋಟ್, ಪುಲ್ವಾಮಾ ಇಂಥದ್ದು ಐದು ವರ್ಷಕ್ಕೆ ಒಂದು ಸಾಕು. ಕಾಲದ ಸಮಸ್ಯೆ ಪರಿಹಾರವಾಗುತ್ತದೆ ಎಂದು ವಿಶ್ಲೇಷಿಸಿದರು.

ಮೂರನೆಯದು ‘ಪಾತ್ರ’. ಮತದಾರ ಬಿಜೆಪಿಗೆ ಮತ ಹಾಕಿದ್ದರೂ ಬಿಜೆಪಿಯನ್ನು ನಂಬುತ್ತಿಲ್ಲ. ಮೇಲ್ವರ್ಗದ ಸಮುದಾಯಗಳು ಬಿಜೆಪಿಯ ಜೇಬಿನಲ್ಲಿದ್ದರೂ ಕೆಳಹಂತದ ಸಮುದಾಯಗಳು ಪೂರ್ತಿಯಾಗಿ ಇಲ್ಲ. ಇದನ್ನು ನಿಭಾಯಿಸಲು ತಂದಿರುವುದೇ ಎಸ್ಐಆರ್ ಎಂದು ಹೇಳಿದರು.

ಹಿಂದಿನ 15 ಚುನಾವಣೆಗಳಲ್ಲಿ ಮತ ಹಾಕಿದ್ದರೂ ಹಿಂದೆ ಇದ್ದ ಸ್ಥಳದಲ್ಲೇ ವಾಸವಾಗಿದ್ದರೂ ಮತ್ತೆ ಮತದಾರರ ಪಟ್ಟಿಗೆ ಸೇರಲು ಅರ್ಜಿ ಹಾಕಬೇಕಿದೆ. ಇಲ್ಲದೇ ಇದ್ದರೆ ಹೆಸರನ್ನು ಕಿತ್ತು ಹಾಕುತ್ತಾರೆ. ಪರಿಷ್ಕರಣೆಗಳು ಹಿಂದೆಯೂ ನಡೆದಿದ್ದವು. ಮತದಾರರು ಮೃತಪಟ್ಟಿದ್ದರೆ, ಬೇರೆಡೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದರೆ ಪಟ್ಟಿಯಿಂದ ತೆಗೆದು ಹಾಕಲಾಗುತ್ತಿತ್ತು. ಹೊಸ ಮತದಾರರನ್ನು ಸೇರ್ಪಡೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಆ ರೀತಿಯಲ್ಲ. ಹೊಸಪಟ್ಟಿಯನ್ನೇ ತಯಾರಿಸಲಾಗುತ್ತಿದೆ ಎಂದರು.

‘ಬಿಹಾರದಲ್ಲಿ 65 ಲಕ್ಷ ಹೆಸರುಗಳನ್ನು ತೆಗೆಯಲಾಯಿತು. ಗುಜರಾತ್ನಲ್ಲಿ 2.90 ಕೋಟಿ ಮತದಾರರನ್ನು ಅಳಿಸಿ, 80 ಲಕ್ಷ ಸೇರಿಸಲಾಗಿದೆ. ಅಲ್ಲಿ 2 ಕೋಟಿ ಮತದಾರರು ಮತದಾನದ ಹಕ್ಕು ಕಳೆದುಕೊಂಡರು. ಗುಜರಾತ್, ತಮಿಳುನಾಡಿನಲ್ಲಿಯೂ ಇದೇ ರೀತಿ ಮಾಡಲಾಗಿದೆ’ ಎಂದರು.

‘ಕರ್ನಾಟಕ ಸ್ಪಷ್ಟ ನಿಲುವು ತೆಗೆದುಕೊಳ್ಳಲಿ’

‘ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಎಸ್ಐಆರ್ ಆರಂಭವಾಗಲಿದೆ. ಹಲವು ವಿಷಯಗಳಿಗೆ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕವು ಈ ವಿಚಾರದಲ್ಲಿಯೂ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು’ ಎಂದು ಯೋಗೇಂದ್ರ ಯಾದವ್ ಸಲಹೆ ನೀಡಿದರು. ಬೇರೆ ರಾಜ್ಯಗಳಲ್ಲಿ ಮತದಾರರ ಪಟ್ಟಿಯಿಂದ ತೆಗೆದು ಹಾಕಿದವರಲ್ಲಿ ವಿದೇಶಿ ನುಸುಳುಕೋರರು ಇಲ್ಲ. ಮುಸ್ಲಿಮರು ಮಾತ್ರವಲ್ಲ. ಬಡವರು ಮತ್ತು ವಲಸೆ ಸಮುದಾಯದವರೇ ಹೆಚ್ಚಿದ್ದಾರೆ. ಅದರಲ್ಲಿಯೂ ಮಹಿಳೆಯರ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.