ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಎಸ್‌ಸಿಗೆ ಹೊಸ ಲಾಂಛನ

ಏರಿಯಲ್‌ ಡಿಟೆರ್ಜಂಟ್‌ ಕಂಪನಿ ಲಾಂಛನದ ಹೋಲಿಕೆ: ವಿದ್ಯಾರ್ಥಿಗಳ ಅಸಮಾಧಾನ
Last Updated 20 ಆಗಸ್ಟ್ 2019, 20:05 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ನೂತನ ಲಾಂಛನವನ್ನು ಮಂಗಳವಾರ ಅನಾವರಣಗೊಳಿಸಲಾಯಿತು. ಅಣುಶಕ್ತಿ ಆಧಾರಿತ ಸಂಕೇತವನ್ನು ಹೊಂದಿರುವ ಈ ಲಾಂಛನವನ್ನು ಪ್ರತಿನಿಧಿಸುವ ರೀತಿಯಲ್ಲಿ ನಿಂತ ವಿದ್ಯಾರ್ಥಿಗಳು ಕ್ಯಾಮೆರಾಗೆ ಪೋಸು ನೀಡಿದರು.

‘ಐಐಎಸ್‌ಸಿ ಕುರಿತ ನಾಮಫಲಕಗಳು ಸಾಮಾನ್ಯವಾಗಿದ್ದು ಅದರಲ್ಲಿ ಹೊಸತನವಿರಲಿಲ್ಲ. ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳನ್ನು ಕಂಡು ಸ್ಫೂರ್ತಿ ಪಡೆದು ಹೊಸ ಲಾಂಛನವನ್ನು ಹೊಂದುವ ತೀರ್ಮಾನ ಕೈಗೊಳ್ಳಲಾಯಿತು. ಪ್ರೊ. ಕೌಶಲ್‌ ವರ್ಮಾ ನೇತೃತ್ವದ ತಂಡವು, ಮುಂಬೈನ ವ್ಯಾಸ್‌ ಜಿಯಾನ್ನೆಟ್ಟಿ ಕ್ರಿಯೆಟಿವ್‌ (ವಿಜಿಸಿ) ಕಲಾ ಕಂಪನಿಯ ಜೊತೆಗೂಡಿ ಈ ಲಾಂಛನವನ್ನು ರೂಪಿಸಿದೆ’ ಎಂದು ಐಐಎಸ್‌ಸಿ ನಿರ್ದೇಶಕ ಡಾ. ಅನುರಾಗ್‌ ಕುಮಾರ್‌ ತಿಳಿಸಿದರು.

ವಿದ್ಯಾರ್ಥಿ ಸಮೂಹವು ಈ ನೂತನ ಲಾಂಛನವನ್ನು ಯಾವುದೇ ವಿರೋಧವಿಲ್ಲದೆ ಸ್ವಾಗತಿಸಲಿದೆ ಎಂಬ ನಂಬಿಕೆ ಸಂಸ್ಥೆಯ ಆಡಳಿತ ಮಂಡಳಿಯದ್ದಾಗಿತ್ತು. ಆದರೆ, ಇದು ಏರಿಯಲ್‌ ಡಿಟೆರ್ಜಂಟ್‌ ಕಂಪನಿಯ ಲಾಂಛನವನ್ನು ಹೋಲುತ್ತದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟಿಸಿದರು.

‘ವಿಜಯಮಾಲೆಯ ಒಳಗೆ ದೀವಟಿಗೆ ಹೊಂದಿದ್ದ ಹಳೆಯ ಲಾಂಛನವೇ ಐಐಎಸ್‌ಸಿಗೆ ಸೂಕ್ತವಾಗಿತ್ತು. 67 ವರ್ಷಗಳವರೆಗೆ ಸಂಸ್ಥೆ ಈ ಲಾಂಛನ ಹೊಂದಿದ್ದು, ಹೆಚ್ಚು ಅರ್ಥಪೂರ್ಣವಾಗಿತ್ತು’ ಎಂದು ವಿದ್ಯಾರ್ಥಿಗಳು ಹೇಳಿದರು.

ಶೇ 90ರಷ್ಟು ವಿದ್ಯಾರ್ಥಿಗಳು ನೂತನ ಲಾಂಛನದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

‘ನೂತನ ಲಾಂಛನ ರೂಪಿಸುವ ಮುನ್ನ ಎಲ್ಲ ವಿದ್ಯಾರ್ಥಿಗಳ ಸಲಹೆ ಕೇಳಲಾಗಿತ್ತು. ಆದರೆ, 800 ವಿದ್ಯಾರ್ಥಿಗಳು ಮಾತ್ರ ಪ್ರತಿಕ್ರಿಯೆ ನೀಡಿದ್ದರು’ ಎಂದು ಅನುರಾಗ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT