ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹39.10 ಲಕ್ಷ ಮೌಲ್ಯದ ಚಿನ್ನಾಭರಣ ವಶ

Last Updated 21 ಆಗಸ್ಟ್ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ಬೀಗ ಹಾಕಿದ ಮನೆ ಗುರುತಿಸಿ ಚಿನ್ನಾಭರಣ ದೋಚುತ್ತಿದ್ದ ಕಳ್ಳ ಮತ್ತು ಕದ್ದ ಚಿನ್ನವನ್ನು ಪಡೆಯುತ್ತಿದ್ದ ಚಿನ್ನದಂಗಡಿಯ ವ್ಯವಸ್ಥಾಪಕನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ತಿಪಟೂರು ತಾಲ್ಲೂಕಿನ ಹಾಲಕುರ್ಕಿ ಗ್ರಾಮದ ಯೋಗೇಶ್ (26) ಮತ್ತು ಈತ ಕಳವು ಮಾಡಿ ತರುವ ಮಾಲುಗಳನ್ನು ಪಡೆಯು
ತ್ತಿದ್ದ ಅಟ್ಟಿಕಾ ಗೋಲ್ಡ್ ಕಂಪನಿಯ ಬೊಮ್ಮನಹಳ್ಳಿ ಶಾಖೆಯ ಮ್ಯಾನೇಜರ್‌ ದೇವೇಂದ್ರ ಬಾಬು (26) ಬಂಧಿತರು. ಬಂಧಿತರಿಂದ ₹39.10 ಲಕ್ಷ ಮೌಲ್ಯದ 1.13 ಕೆ.ಜಿ. ಚಿನ್ನಾಭರಣ, 250 ಗ್ರಾಂ ಬೆಳ್ಳಿ ವಸ್ತುಗಳು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಎರಡು ಬೈಕ್‌
ವಶಪಡಿಸಿಕೊಳ್ಳಲಾಗಿದೆ.

ಟಿ. ದಾಸರಹಳ್ಳಿಯ ಮಹೇಶ್ವರಿ ನಗರದ 5ನೇ ಅಡ್ಡರಸ್ತೆಯ ನಿವಾಸಿ ಆದಿನಾರಾಯಣ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಏಪ್ರಿಲ್ 20ರಂದು ರಾತ್ರಿ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿರುವ ಮೈಲಾರ ದೇವಸ್ಥಾನಕ್ಕೆ ಹೋಗಿದ್ದರು. ಮರುದಿನ ರಾತ್ರಿ ಮರಳಿ ಬಂದಾಗ ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ 45 ಗ್ರಾಂ ತೂಕದ ಚಿನ್ನಾಭರಣ ಕಳವು ಆಗಿತ್ತು. ಈ ಬಗ್ಗೆ ಬಾಗಲಗುಂಟೆ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಹಲವು ಕಳ್ಳತನ ಪ್ರಕರಣಗಳ ಆರೋಪಿ ನಾಗಸಂದ್ರದ ಚನ್ನನಾಯಕನಪಾಳ್ಯದ ಯೋಗೇಶ್‍ ಎಂಬಾತನನ್ನು ವಿಚಾರಣೆಗೊಳಪಡಿಸಿದಾಗ ಆತನೇ ನಡೆಸಿರುವ ಸಂಗತಿ ಬಯಲಾಗಿದೆ ತಾನು ಕದ್ದ ಚಿನ್ನಾಭರಣ ಗೋಲ್ಡ್ ಕಂಪನಿಯೊಂದರ ಮ್ಯಾನೇಜರ್‌ ಪಡೆಯುತ್ತಿದ್ದ ಬಗ್ಗೆಯೂ ಮಾಹಿತಿ ನೀಡಿದ್ದ. ಆ ಮಾಹಿತಿ ಆಧಾರದಲ್ಲಿ ಪೊಲೀಸರು ಶೋಧ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT