ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈದ್ಯರು ದೇವರ ಸಮಾನ’

Last Updated 16 ಅಕ್ಟೋಬರ್ 2019, 15:42 IST
ಅಕ್ಷರ ಗಾತ್ರ

ತಾಂಬಾ: ‘ಒಂದು ದೇಶ ಮುಂದುವರೆಯಲು ಅಲ್ಲಿನ ಮಾನವಸಂಪನ್ಮೂಲ ಪ್ರಮುಖವಾಗಿದೆ. ಜೀವನದಲ್ಲಿ ಎಲ್ಲವನ್ನೂ ಗಳಿಸಬಹುದು. ಆದರೆ, ಆರೋಗ್ಯ ಸಂಪತ್ತು ಗಳಿಸುವುದು ಕಷ್ಟದಾಯಕ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಇಲ್ಲಿಗೆ ಸಮೀಪದ ಅಥರ್ಗಾ ಗ್ರಾಮದಲ್ಲಿ ಬುಧವಾರ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ವೈದ್ಯರು ದೇವರ ಸಮಾನ. ವೈದ್ಯರು ರೋಗಿಗಳಿಗೆ ಚಿಕಿತ್ಸೆಗೂ ಮುನ್ನ ಮೃದುವಾಗಿ ಮಾತನಾಡಿದರೆ ಅರ್ಧ ರೋಗ ವಾಸಿಯಾದಂತೆ. ಇಂದು ಸರರ್ಕಾಗಳು ಬಡವರಿಗಾಗಿ ಉಚಿತ ಆರೋಗ್ಯ ಕವಚ, ಬಿಪಿಎಲ್ ಕಾರ್ಡ್‌ ಇದ್ದರೆ ಸಂಪೂರ್ಣ ಉಚಿತ ಸೇವೆ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿವೆ’ ಎಂದು ತಿಳಿಸಿದರು.

‘ಅಥರ್ಗಾ ಗ್ರಾಮದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎಂಬುದು ನನ್ನ ಆಶಯವಾಗಿತ್ತು. ಈಗ ₹1.90 ಕೋಟಿ ಅನುದಾನದಲ್ಲಿ 30ಹಾಸಿಗೆಯುಳ್ಳ ನೂತನ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ’ ಎಂದರು.

ಎಪಿಎಂಸಿ ಅಧ್ಯಕ್ಷ ಬಸವರಾಜ ಕಾಸಬಾಗ, ಜಿಲ್ಲಾ ಪಂಚಾಯಿತಿ ಸದಸ್ಯ ಮಹಾದೇವ ಗಡ್ಡದ, ಅಶೋಕಗೌಡ ಬಿರಾದಾರ, ತಾಲ್ಲೂಕು ಪಂಚಾಯಿತಿ ಸದಸ್ಯ ಗಣಪತಿ ಬಾಣಿಕೋಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ ಚಾಂದಕವಠೆ, ಮಲಕಪ್ಪ ಬೋಳೆಗಾಂವ, ನಾಗುಗೌಡ ಪಾಟೀಲ, ಸುನೀಲ ರಬಶೇಟ್ಟಿ, ವಿದ್ಯಾಧರ ಜವೂರ, ಶಿವಶರಣ ನಾಗಣಸೂರ, ಹಣಮಂತರಾಯಗೌಡ ಬಿರಾದಾರ, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅರ್ಚನಾ ಕುಲಕರ್ಣಿ, ಆರೋಗ್ಯ ಅಧಿಕಾರಿ ಸಿ.ಎಂ.ತಾಳಿಕೋಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT