ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಸುಧಾ ವಿದ್ಯಾಲಯಕ್ಕೆ ಶೇ 100 ಫಲಿತಾಂಶ

Last Updated 20 ಮೇ 2022, 14:12 IST
ಅಕ್ಷರ ಗಾತ್ರ

ಬೀದರ್: ನಗರದ ಆಂಗ್ಲಮಾಧ್ಯಮ ಜ್ಞಾನಸುಧಾ ವಿದ್ಯಾಲಯವು ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಕ್ಕೆ 100 ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದೆ.

ಪರೀಕ್ಷೆಗೆ ಹಾಜರಾದ 64 ವಿದ್ಯಾರ್ಥಿಗಳಲ್ಲಿ 16 ಅಗ್ರಶ್ರೇಣಿ, 47 ಪ್ರಥಮ ದರ್ಜೆ ಹಾಗೂ ಒಬ್ಬರು ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀಣರಾಗಿದ್ದಾರೆ.

ಶ್ರೀನಿವಾಸ ನಾಗನಾಥ ಶೇ 97.92 ಅಂಕ ಗಳಿಸಿ ಶಾಲೆಗೆ ಮೊದಲಿಗರಾಗಿದ್ದಾರೆ. ಸೌಮ್ಯ ದಶರಥ ಶೇ 94.4, ವೈಭವ ವಿಠ್ಠಲರಾವ್ ಶೇ 92.32, ಸುಜಲ್ ರಾಜಕುಮಾರ ಶೇ 91.68, ಸುಮೀತ್ ಶಿವಕುಮಾರ ಶೇ 90.4, ರುತಿಕಾ ಎಂ.ಈಶ್ವರ ಶೇ 90.24, ರೋಹನ್ ವಿಷ್ಣು ಶೇ 89.76, ಪವನ್ ಸಂಜೀವಕುಮಾರ, ಶಿವಾಜಿ ಮಹೇಶ್ ಶೇ 89.6, ಎಂ.ಎ.ಫಾಬಿ ಎಂ.ಎ.ಸಮೇ, ಸಾಯಿಕಿರಣ ಶಿವಕುಮಾರ ಶೇ 87.36, ಮೈತ್ರಾ ಅಂಬೋಜಿ, ದಿವ್ಯ ಮಲ್ಲಯ್ಯ ಶೇ 86.88, ಸಯದ್ ಮುಜತಬುದ್ದಿನ್ ಸಯದ್ ಮುಜಫರುದ್ದಿನ್ ಶೇ 85.92, ವಿದ್ಯಾಧರ ಅನಿಲಕುಮಾರ ಶೇ 85.6, ಜ್ಞಾನೇಶ್ವರ ಶಿವಾಜಿ ಶೇ 85.12 ಅಂಕ ಪಡೆದು ಉತ್ತಮ ಸಾಧನೆ ತೋರಿದ್ದಾರೆ. ಸಮಾಜ ವಿಜ್ಞಾನದಲ್ಲಿ ನಾಲ್ವರು, ಹಿಂದಿಯಲ್ಲಿ ಒಬ್ಬರು ವಿದ್ಯಾರ್ಥಿ 100ಕ್ಕೆ 100 ಅಂಕ ಪಡೆದಿದ್ದಾರೆ.

ಗುಣಮಟ್ಟದ ಶಿಕ್ಷಣ, ಶಿಕ್ಷಕರ ಮಾರ್ಗದರ್ಶನ ಹಾಗೂ ಪಾಲಕರ ಸಹಕಾರದಿಂದಾಗಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ, ನಿರ್ದೇಶಕ ಮುನೇಶ್ವರ ಲಾಖಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT