ಗುರುವಾರ , ಡಿಸೆಂಬರ್ 3, 2020
18 °C

1,200 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಇಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಕಾಳ ಸಂತೆಯಲ್ಲಿ ಮಾರಾಟಕ್ಕೆ ನಾಲ್ಕು ಲಾರಿಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಒಟ್ಟು 1,200 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಶುಕ್ರವಾರ ಜಪ್ತಿ ಮಾಡಿಕೊಳ್ಳಲಾಗಿದೆ.

ಅಕ್ಕಿಯನ್ನು ಗುರುಮಿಠಕಲ್‌ದಿಂದ ಗುಜರಾತಗೆ ಒಯ್ಯಲಾಗುತ್ತಿತ್ತು ಎನ್ನಲಾಗಿದ್ದು, ಒಂದೊಂದು ಲಾರಿಯಲ್ಲಿ ₹ 9 ಲಕ್ಷದ 300 ಕ್ವಿಂಟಾಲ್ ಅಕ್ಕಿ ದೊರೆತಿದೆ. ಒಟ್ಟು ₹ 36 ಲಕ್ಷದ ಅಕ್ಕಿ ಹಾಗೂ ನಾಲ್ಕು ಲಾರಿಗಳ ಮೌಲ್ಯ ಒಳಗೊಂಡು ಒಟ್ಟು ₹1.16 ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ನಾಲ್ಕು ಲಾರಿಗಳ ಚಾಲಕರು, ನಿರ್ವಾಹಕರು ಮತ್ತು  ಅಕ್ಕಿ ಲೋಡ್ ಮಾಡಲು ಸಹಕರಿಸಿದ ಗುರುಮಿಠಕಲನ ಮಣಿಕಂಠ ರಾಠೋಡ ಮತ್ತು ವಿಜಯ ಪವಾರ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆಹಾರ ನಿರೀಕ್ಷಕರಾದ ರಾಜೇಂದ್ರಕುಮಾರ ಹಾಗೂ ರಾಮರತನ ದೇಗಲೆ ನೇತೃತ್ವದಲ್ಲಿ ಜಪ್ತಿ ಕಾರ್ಯ ನಡೆದಿದ್ದು ಪೊಲೀಸ್ ಸಿಬ್ಬಂದಿ ಕೂಡ ಈ ಕಾರ್ಯದಲ್ಲಿ ಸಹಕಾರ ನೀಡಿದ್ದಾರೆ. ತಹಶೀಲ್ದಾರ್ ಸಾವಿತ್ರಿ ಸಲಗರ, ಎಸ್‌ಐ ಗುರು ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.