ಭಾನುವಾರ, ಆಗಸ್ಟ್ 18, 2019
23 °C

ಇಬ್ಬರು ಬೈಕ್ ಕಳ್ಳರ ಬಂಧನ, 14 ಬೈಕ್ ವಶ

Published:
Updated:

ಬೀದರ್: ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಪೊಲೀಸರು 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ನೆರೆಯ ಮಹಾರಾಷ್ಟ್ರದ ಉದಗಿರದ ಬನಶೆಳಕಿ ರಸ್ತೆಯ ನಾಲಂದ ನಗರದ ಬಾಲಾಜಿ ಬಾಬುರಾವ್ ಶ್ರೀಮಂಗಲೆ ಹಾಗೂ ಕೃಷ್ಣಾ ಶಿವಾಜಿ ಗೋಡಕೆ ಬಂಧಿತರು. ನಾಲಂದ ನಗರ ಹತ್ತಿರದ ಸಾಯಿನಗರದ ಕಿಶೋರ ಸಕಾರಾಮ ಕಾಂಬಳೆ ತಲೆಮರೆಸಿಕೊಂಡಿದ್ದಾನೆ.

ವಶಪಡಿಸಿಕೊಳ್ಳಲಾದ ವಾಹನಗಳನ್ನು ಬೀದರ್ ನಗರ ಹಾಗೂ ಉದಗಿರದಲ್ಲಿ ಕಳವು ಮಾಡಿದ್ದು, ಇವುಗಳ ಅಂದಾಜು ಮೌಲ್ಯ ₹6 ಲಕ್ಷ ಆಗಿದೆ. ಮಾರ್ಕೇಟ್ ಸಿಪಿಐ ಎಚ್.ಎಸ್. ಜಗದೀಶ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Post Comments (+)