ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ರಂದು ರಾಮಲೀಲಾ ಉತ್ಸವ, ರಾವಣ ದಹನ

Last Updated 15 ಅಕ್ಟೋಬರ್ 2018, 14:55 IST
ಅಕ್ಷರ ಗಾತ್ರ

ಬೀದರ್: ಶ್ರೀ ರಾಮಲೀಲಾ ಉತ್ಸವ ಸಮಿತಿಯು ವಿಜಯದಶಮಿಯನ್ನು ಸಾಂಸ್ಕೃತಿಕ ಕಾರ್ಯಕ್ರಮ, ರಾಮಲೀಲಾ ಉತ್ಸವ ಹಾಗೂ ರಾವಣ ದಹನದೊಂದಿಗೆ ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ.

ನಗರದ ದೇವಿ ಕಾಲೊನಿಯ ಭವಾನಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಅಕ್ಟೋಬರ್ 18 ರಂದು ಸಾಂಸ್ಕೃತಿಕ ಕಾರ್ಯಕ್ರಮ, 19 ರಂದು ಸಂಜೆ 6 ರಿಂದ ರಾತ್ರಿ 10 ರವರೆಗೆ ರಾಮಲೀಲಾ ಉತ್ಸವ ಹಾಗೂ ರಾವಣ ದಹನ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು. ಶ್ರೀ ರಾಮಲೀಲಾ ಉತ್ಸವ ಸಮಿತಿಯ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳ ವಿವರ ಹೀಗಿದೆ. ರಾಜಕುಮಾರ ಅಗ್ರವಾಲ (ಗೌರವಾಧ್ಯಕ್ಷ), ಈಶ್ವರಸಿಂಗ್ ಠಾಕೂರ(ಸಂಸ್ಥಾಪಕ ಅಧ್ಯಕ್ಷ), ಚಂದ್ರಶೇಖರ ಗಾದಾ (ಅಧ್ಯಕ್ಷ), ಯೋಗೇಶ ಪಾಠಕ, ಸುನೀಲ ಕಟಗಿ, ರಾಜೇಂದ್ರ ಪೂಜಾರಿ, ಉಮೇಶ ಕೋಮಟಕರ್, ಸುನೀಲ ಕುಲಕರ್ಣಿ, ನಿತೇಶಕುಮಾರ ಬಿರಾದಾರ, ವೆಂಕಟ ಮರಕಲ್ (ಉಪಾಧ್ಯಕ್ಷರು), ಮಹೇಶ್ವರ ಸ್ವಾಮಿ (ಪ್ರಧಾನ ಕಾರ್ಯದರ್ಶಿ), ಆನಂದ ಕೋಮಟಕರ್, ಸಂಜು ಧನಶ್ರೀ, ವಿಜಯಕುಮಾರ ಪಾಟೀಲ, ವಸಂತ ಬಿರಾದಾರ, ಬಸವರಾಜ ದೊಮಲ, ಬಾದಲ ಚವ್ಹಾಣ್, ಶ್ರೀಶಾಂತ ಹಿವರೆ (ಕಾರ್ಯದರ್ಶಿಗಳು) ಮತ್ತು ರಾಜಕುಮಾರ (ಕೋಶಾಧ್ಯಕ್ಷ).
ಪ್ರಚಾರ ಸಮಿತಿ: ನಿಲೇಶ ರಕ್ಷಾಳ (ಅಧ್ಯಕ್ಷ), ಅನಿಲ ರಾಜಗೀರಾ (ಕಾರ್ಯಾಧ್ಯಕ್ಷ). ಅಲಂಕಾರ ಸಮಿತಿ: ವಿನೋದ ಪಾಟೀಲ (ಅಧ್ಯಕ್ಷ), ಹಣಮಂತ ಕೋಮಟಕರ್ (ಕಾರ್ಯಾಧ್ಯಕ್ಷ). ವ್ಯವಸ್ಥಾಪನಾ ಸಮಿತಿ: ನಾಗರಾಜ ದೇಶಮುಖ (ಅಧ್ಯಕ್ಷ), ಹರೀಶ ಸೂರಂಪಳ್ಳಿ, ಚೇತನ ಶೇಂದ್ರೆ, ವಿಕಾಸ ಕಸಬೆ, ರಾಜು ಸ್ವಾಮಿ, ಸಿದ್ದು ಸ್ವಾಮಿ, ಗುರುರಾಜ (ಪುಟ್ಟು), ವಿನಯ ಶೇಂದ್ರೆ (ಸದಸ್ಯರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT