ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಎರಡನೇ ದಿನ 2,132 ಅಭ್ಯರ್ಥಿಗಳು ಭಾಗಿ

ಅಗ್ನಿ ಪಥ ಸೇನಾ ನೇಮಕಾತಿ ರ‍್ಯಾಲಿ: ಎರಡನೇ ದಿನ ಸುಸೂತ್ರ
Last Updated 6 ಡಿಸೆಂಬರ್ 2022, 15:24 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾಡಳಿತದ ಸಹಕಾರದೊಂದಿಗೆ ಸೇನಾ ನೇಮಕಾತಿ ವಿಭಾಗದವರು ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ಎರಡನೇ ದಿನವಾದ ಮಂಗಳವಾರ ಅಗ್ನಿ ಪಥ ಅಗ್ನಿ ವೀರರಿಗಾಗಿ ನಡೆಸಿದ ಸೇನಾ ನೇಮಕಾತಿ ರ‍್ಯಾಲಿಯಲ್ಲಿ 2,132 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾದರು.

ಕುಷ್ಟಗಿಯ 1520, ಕೊಪ್ಪಳ ತಾಲ್ಲೂಕಿನ 612 ಯುವಕರು ಹಾಗೂ ಸೋಮವಾರ ಅಫಿಡವಿಟ್‌ ಸಲ್ಲಿಸಲು ವಿಳಂಬ ಮಾಡಿದ ಯುವಕರಿಗೆ ಅವಕಾಶ ಕಲ್ಪಿಸಲಾಯಿತು.

ರೋಟರಿ ವೃತ್ತ ಬಳಿಯ ಸಾಯಿ ಆದರ್ಶ ಶಾಲೆಯ ಆವರಣ, ಮೇಲ್ಚಾವಣಿ, ಮೈದಾನ, ಬಸ್‌ ತಂಗು ನಿಲ್ದಾಣ, ನಗರಸಭೆ ಕಚೇರಿ ಆವರಣ, ಗ್ರಾಮೀಣ ಬಸ್‌ ನಿಲ್ದಾಣ, ಹಾಗೂ ರೈಲು ನಿಲ್ದಾಣದಲ್ಲಿ ತಂಗಿದ್ದ ಅಭ್ಯರ್ಥಿಗಳು ಬೆಳಗಿನ ಜಾವ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಿದರು.

ಕೆಲ ಯವಕರು ಶಿವಾಜಿ ವೃತ್ತದಲ್ಲಿರುವ ಪ್ರತಿಮೆಯ ಬಳಿಯ ಸಾರ್ವಜನಿಕ ನಳದಲ್ಲಿನ ನೀರು ಪಡೆದು ಸ್ನಾನ ಮಾಡಿದರು. ಜಿಲ್ಲಾಡಳಿತ ಮೊದಲ ದಿನ ಎದುರಾಗಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡು ಕಾರಣ ಮಂಗಳವಾರ ಯಾವುದೇ ಸಮಸ್ಯೆ ಕಂಡು ಬರಲಿಲ್ಲ.

ಪೊಲೀಸ್‌ ಸಿಬ್ಬಂದಿ ಬೆಳಗಿನ ಜಾವ ರೋಟರಿ ವೃತ್ತದ ಮಾರ್ಗದಲ್ಲಿನ ದಟ್ಟಣೆ ನಿಯಂತ್ರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಡಿಎಆರ್‌ ತುಕಡಿಯನ್ನು ನಿಯೋಜಿಸಲಾಗಿತ್ತು. ಡಿ.7 ರಂದು ಕಲಬುರಗಿ, 8 ರಂದು ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT