ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಸೇವನೆಯಿಂದ 30 ಲಕ್ಷ ಸಾವು: ಡಾ. ಶೈಲೇಂದ್ರ

ಕರ್ನಾಟಕ ಕಾಲೇಜಿನಲ್ಲಿ ತಂಬಾಕು ನಿಲುಗಡೆ ಕಾರ್ಯಕ್ರಮ
Last Updated 27 ಜುಲೈ 2022, 7:48 IST
ಅಕ್ಷರ ಗಾತ್ರ

ಬೀದರ್: ಬೀಡಿ, ಸಿಗರೇಟ್, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆಯಿಂದ ದೇಶದಲ್ಲಿ ಪ್ರತಿ ವರ್ಷ 30 ಲಕ್ಷ ಜನ ಸಾವಿಗೀಡಾಗುತ್ತಿದ್ದಾರೆ ಎಂದು ಎಸ್.ಬಿ. ಪಾಟೀಲ ದಂತ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಪ್ರಾಚಾರ್ಯ ಡಾ. ಶೈಲೇಂದ್ರ ಮಾಶಾಳಕರ್ ಹೇಳಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ರೆಡ್ ಕ್ರಾಸ್ ಸಂಸ್ಥೆ, ಎಸ್.ಬಿ. ಪಾಟೀಲ ದಂತ ವೈದ್ಯಕೀಯ ಕಾಲೇಜು, ಕರ್ನಾಟಕ ಕಾಲೇಜಿನ ಪ್ರಾಣಿ ವಿಜ್ಞಾನ ವಿಭಾಗ, ಎನ್.ಎಸ್.ಎಸ್. ‘ಎ' ಮತ್ತು ‘ಬಿ' ಘಟಕಗಳ ವತಿಯಿಂದ ಹಮ್ಮಿಕೊಂಡಿದ್ದ ತಂಬಾಕು ನಿಲುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂಬಾಕು ಸೇವನೆ ಬಹಳ ಅಪಾಯಕಾರಿಯಾಗಿದೆ. ಕಾರಣ, ಯುವ ಜನರು ತಂಬಾಕು ಉತ್ಪನ್ನಗಳಿಂದ ದೂರ ಇರಬೇಕು ಎಂದು ಹೇಳಿದರು.ತಂಬಾಕು ಚಟ ಅಂಟಿಸಿಕೊಂಡವರು ದೃಢ ಸಂಕಲ್ಪ ಮಾಡಿದ್ದಲ್ಲಿ ತಂಬಾಕು ಸೇವನೆ ತ್ಯಜಿಸಬಹುದು ಎಂದು ತಿಳಿಸಿದರು.


ಲಾಡಗೇರಿ ಮಠದಲ್ಲಿ ತಪಾಸಣೆ:

ಉದ್ಘಾಟನಾ ಸಮಾರಂಭದ ನಂತರ ಲಾಡಗೇರಿ ಹಿರೇಮಠದಲ್ಲಿ ದಂತ ತಪಾಸಣೆ ನಡೆಯಿತು.
ದಂತ ತಪಾಸಣೆಗೆ ಕೆಆರ್‍ಇ ಸಂಸ್ಥೆ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಚಾಲನೆ ನೀಡಿದರು.
ಕೆಆರ್‍ಇ ಸಂಸ್ಥೆಯ ಟ್ರಸ್ಟಿ ಚನ್ನಬಸಪ್ಪ ಹಾಲಹಳ್ಳಿ, ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ್ ಪಾಟೀಲ, ಆಡಳಿತ ಮಂಡಳಿ ಸದಸ್ಯ ಚಂದ್ರಕಾಂತ ಶೆಟಕಾರ್, ನಿರ್ದೇಶಕ ರವಿ ಹಾಲಹಳ್ಳಿ, ಎನ್‍ಎಸ್‍ಎಸ್ ಅಧಿಕಾರಿಗಳಾದ ಎ.ಡಿ. ಶೆಟಕಾರ್, ಸೋಮನಾಥ ಬಿರಾದಾರ, ಮಧುಸೂಧನ್ ಕುಲಕರ್ಣಿ, ಡಾ. ಚಂದ್ರಶೇಖರ ಗೌಡ ಪಾಟೀಲ, ಡಾ. ಶರತಚಂದ್ರ ಪಾಟೀಲ, ಸಿದ್ಧನಗೌಡ ಆರ್. ಇದ್ದರು.
ಡಾ. ರಾಣಿಬಾಯಿ ಸ್ವಾಗತಿಸಿದರು. ಪಲ್ಲವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT