ಬೀದರ್: ತಾಲ್ಲೂಕಿನ ಅಷ್ಟೂರ್ ಗ್ರಾಮದಲ್ಲಿರುವ ಹಜರತ್ ಸುಲ್ತಾನ್ ಅಹ್ಮದ ಶಾ ವಲಿ ಬಹಮನಿ ದರ್ಗಾದಲ್ಲಿ 609ನೇ ಸಂದಲ್ ಶರೀಫ್ ಜಾತ್ರಾ ಮಹೋತ್ಸವವು ಮಾರ್ಚ್ 5ರಿಂದ ಆರಂಭಗೊಳ್ಳಲಿದೆ.

ಹಜರತ್ ಸುಲ್ತಾನ್ ಅಹ್ಮದ ಶಾ ವಲಿ ಬಹಮನಿ ಅವರ ಹುಟ್ಟಿದ ದಿನದ ಅಂಗವಾಗಿ ಗುಮ್ಮಟದ ಅಡಿಯಲ್ಲಿ ಸಂದಲ್ ಶರೀಫ್ ಕಾರ್ಯಕ್ರಮ ನಡೆಯಲಿದೆ. ಮಾ. 10ರಂದು ಸಂಜೆ 6ಕ್ಕೆ ಕಲಾಂ ಪಠಣ ಹಾಗೂ ಮೊದಲ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಈ ಮಹೋತ್ಸವ ಐದು ದಿನಗಳವರೆಗೆ ನಡೆಯಲಿದ್ದು, ಬೀದರ್ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಜಾತಿ-ಧರ್ಮ ಭೇದವಿಲ್ಲದೆ ಭಾಗವಹಿಸಲಿದ್ದಾರೆ.

ಜಾತ್ರೆಯ ಸಂದರ್ಭದಲ್ಲಿ ಹಜರತ್ ವಲಿಯವರ ಸಮಾಧಿಯನ್ನು ಗುಲಾಬಿ ನೀರಿನಿಂದ ಸ್ವಚ್ಛಗೊಳಿಸಿ, ಚಾದರ್ ಹಾಗೂ ಹೂವಿನ ಅಲಂಕಾರ ಮಾಡಲಾಗುತ್ತದೆ. ನಂತರ ಕಲಾಂ ಪಠಣ ನಡೆಯಲಿದೆ. ದರ್ಗಾದ ಸಜ್ಜಾದ ನಶೀನ್ ಮತ್ತು ಮುತುವಲ್ಲಿಯಾದ ಸುಲ್ತಾನ ಖಲೀಲ್ ಶಾಹ ಬಹಮನಿ (12ನೇ ತಲೆಮಾರಿನವರು) ಅವರಿಂದ ಮಿಲಾದ್ ಕಾರ್ಯಕ್ರಮ ನೆರವೇರಿಸಲಾಗುತ್ತದೆ.

ಮಾ. 13ರಂದು ದೀಪಾಲಂಕಾರ ಕಾರ್ಯಕ್ರಮ ನಡೆಯಲಿದೆ. ಭಕ್ತರು ಹೂವಿನ ಹಾಗೂ ಬಟ್ಟೆಯ ಚಾದರಗಳನ್ನು ಅರ್ಪಿಸಲಿದ್ದಾರೆ. ಮಾ. 14ರಂದು ಸಂಜೆ ಮದ್ದು ಸುಡುವ ಕಾರ್ಯಕ್ರಮ, ಮಾ. 15ರಂದು ಬೆಳಿಗ್ಗೆ ಕುಸ್ತಿ ಸ್ಪರ್ಧೆಗಳು ನಡೆಯಲಿವೆ. ನಂತರ ಗುರುಗಳು ವಾಪಸ್ ತೆರಳುವರು. ಜಂಗಮರು ಐದು ದಿನಗಳವರೆಗೆ ಮುಖಾಮುಖಿಯಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಸುಲ್ತಾನ್ ಖಲೀಲ್ ಶಾಹ ಬಹಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.