ಭಾಲ್ಕಿ: ಚನ್ನಬಸವ ಪಟ್ಟದ್ದೇವರು ಪತ್ತಿನ ಸಂಘ 2023-24ನೇ ಸಾಲಿನಲ್ಲಿ ₹ 557 ಕೋಟಿ ವಾರ್ಷಿಕ ವಹಿವಾಟು ನಡೆಸುವುದರ ಜತೆಗೆ ₹ 67.34 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಕೆ.ಸಿದ್ರಾಮ ಹೇಳಿದರು.
ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 21ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಂಘ ಅತ್ಯಂತ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ₹ 55 ಕೋಟಿ ಠೇವಣಿ ಇದ್ದು, ₹ 54 ಕೋಟಿ ಸಾಲ ನೀಡಲಾಗಿದ್ದು, ಜಿಲ್ಲೆಯ ಮೂರು ಶಾಖೆಗಳು ಸೇರಿ ಸುಮಾರು ₹12 ಕೋಟಿ ಬಂಗಾರದ ಒಡವೆಗಳ ಮೇಲೆ ಸಾಲ ನೀಡಲಾಗಿದೆ. ಶೇ. 95ರಷ್ಟು ಸಾಲ ವಸೂಲಾತಿ ಇದೆ. ಉಳಿದ ಶೇ.5ರಷ್ಟು ಸಾಲ ವಸೂಲಿಗೂ ಕಾನೂನು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಕಾಯಕ ತತ್ವ ಸಮೃದ್ಧಿಯತ್ತ ಕೊಂಡೊಯ್ಯುತ್ತದೆ. ಗ್ರಾಹಕರ ವಿಶ್ವಾಸ, ಆಡಳಿತ ಮಂಡಳಿಯ ನಿಸ್ವಾರ್ಥ ಕಾಯಕದ ಪರಿಣಾಮ ಸಂಘ ಪ್ರಗತಿಯತ್ತ ದಿಟ್ಟ ಹೆಜ್ಜೆಯಿರಿಸಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಬಸವಲಿಂಗ ಪಟ್ಟದ್ದೇವರು ಕೃಷಿಕರ ಬಡ ಜನರ ದುರ್ಬಲ ವರ್ಗದವರ ಆರ್ಥಿಕ ಪ್ರಗತಿಗಾಗಿ ಸಂಘ ತೆರೆದಿದ್ದು ಅವರ ಆಶಯದಂತೆ ಕರ್ತವ್ಯ ನಿರ್ವಹಿಸುತ್ತಿದೆ.ಗುರುಬಸವ ಪಟ್ಟದ್ದೇವರು ಹಿರೇಮಠ, ಭಾಲ್ಕಿ
ವ್ಯವಸ್ಥಾಪಕ ಗಣಪತಿ ಬಾವುಗೆ ವಾರ್ಷಿಕ ವರದಿ ಮಂಡಿಸಿದರು.
ಸಂಘದ ಬೀದರ್ ಶಾಖೆಯ ಅಧ್ಯಕ್ಷ ಜಯರಾಜ ಖಂಡ್ರೆ, ಔರಾದ್ ಶಾಖೆಯ ಅಧ್ಯಕ್ಷ ರಾಜಶೇಖರ ಅಷ್ಟೂರೆ, ನಿರ್ದೇಶಕರಾದ ಬಾಬುರಾವ್ ಜಲ್ದೆ, ಶರದ ಸಿರ್ಸೆ, ರೇಖಾ ಮಹಾಜನ, ಶಶಿಕಲಾ ಲಕ್ಷ್ಯಣ್ಣ, ಮಲ್ಲಿಕಾರ್ಜುನ ಬುಕ್ಕಾ, ಜಗದೇವಿ ಮದಕಟ್ಟೆ, ರವೀಂದ್ರ ಮೀಸೆ, ಮನ್ಮಥ ಹುಗ್ಗೆ, ಪ್ರಕಾಶ ಘುಳೆ, ಚಂದ್ರಕಾಂತ ನಿರ್ಮಳೆ, ವೈಜಿನಾಥ ಪಾಂಚಾಳ, ನಾಗಪ್ಪ ಮೇತ್ರೆ, ಸುನಿಲ್ ದೇಶಮುಖ, ಬಂಡೆಪ್ಪ ಕಂಟೆ, ಹಿರಿಯ ಸಲಹೆಗಾರ ಚಂದ್ರಶೇಖರ ಪಾಟೀಲ, ಸಂಘದ ಉಪಾಧ್ಯಕ್ಷ ಶರಣಪ್ಪ ಬಿರಾದಾರ, ವೀರಣ್ಣ ಕುಂಬಾರ, ನಿರ್ದೇಶಕ ಅನಿಲ್ ಹಾಲಕುಡೆ ಇದ್ದರು.
ಉತ್ತಮ ಗ್ರಾಹಕರಿಗೆ ಸನ್ಮಾನ: ಇದೇ ವೇಳೆ ಸಕಾಲಕ್ಕೆ ಸಾಲ ಮರುಪಾವತಿಸಿದ ಗ್ರಾಹಕರಾದ ಬಲಭೀಮಯ್ಯ ಸ್ವಾಮಿ, ಶಿವರಾಜ ಸಾವಳೆ, ಪ್ರಭಾಕರ ಹಾಳೆ, ಎಂ.ಡಿ.ಫಾರುಖ್ ಹುಸೇನ್, ಬಸವರಾಜ ಚನಶೆಟ್ಟೆ, ಸುನಿಲಕುಮಾರ ಬಿರಾದಾರ, ಲಕ್ಷ್ಮಣ ರಾಠೋಡ್, ಖಲೀಲ್ ಶರಿಫೋದ್ದಿನ್ ಘೋಡಕೆ, ವಿಶ್ವನಾಥ ಹೇಡೆ, ಶಿವರಾಜ ಸೋನಾರ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.