ಬೀದರ್: 72 ಕೆಜಿ ಗಾಂಜಾ ವಶ

ಬಸವಕಲ್ಯಾಣ: ಇಲ್ಲಿಗೆ ಸಮೀಪದ ಸಸ್ತಾಪುರ ಬಂಗ್ಲಾ ಹತ್ತಿರದಲ್ಲಿ ನಗರ ಠಾಣೆ ಪೊಲೀಸರು ದಾಳಿ ನಡೆಸಿ ₹ 5.4 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿ ಕೊಂಡು ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಒಟ್ಟು 2 ಕೆಜಿಯ 36 ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಮಹಾರಾಷ್ಟ್ರಕ್ಕೆ ಮಾರಾಟಕ್ಕೆ ತೆಗೆದುಕೊಂಡು ಹೋಗಲಾ ಗುತ್ತಿತ್ತು ಎನ್ನಲಾಗಿದ್ದು, ಈ ಸಂಬಂಧ ಮಲ್ಲಿಕಾರ್ಜುನ ನಾಗಪ್ಪ ಸಗರ, ಸಿದ್ರಾಮಪ್ಪ ಬಸವಣ್ಣಪ್ಪ ಗುದಗೆ, ಛಾಯಾ ಬಾಳು ಭೋಸ್ಲೆ ಅವರನ್ನು ಬಂಧಿಸಲಾಗಿದೆ.
ವಿಯವಾಡಾದಿಂದ ಇವರಿಗೆ ಗಾಂಜಾ ಸರಬರಾಜು ಮಾಡಲಾಗಿತ್ತು. ಎಸ್‌ಐ ಗುರು ಪಾಟೀಲ ನೇತೃತ್ವದಲ್ಲಿ ಗಾಂಜಾ ವಶಕ್ಕೆ ತೆಗೆದುಕೊಳ್ಳಲಾಗಿದೆ. ನಂತರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್, ಡಿವೈಎಸ್ಪಿ ಸೋಮಲಿಂಗ ಕುಂಬಾರ ಮತ್ತು ಸಿಪಿಐ ಜೆ.ಎಸ್.ನ್ಯಾಮೆಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.