ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 79 ರೈತರ ಆತ್ಮಹತ್ಯೆ: ಸಚಿವರ ಲಿಖಿತ ಉತ್ತರ

ಎರಡು ವರ್ಷಗಳಲ್ಲಿ 79 ರೈತರ ಆತ್ಮಹತ್ಯೆ
Last Updated 13 ಡಿಸೆಂಬರ್ 2020, 7:17 IST
ಅಕ್ಷರ ಗಾತ್ರ

ಬೀದರ್: ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 79 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 23 ಪ್ರಕರಣಗಳನ್ನು ವಿವಿಧ ಕಾರಣಗಳಿಂದಾಗಿ ತಿರಸ್ಕರಿಸಲಾಗಿದೆ. 50 ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ. ಇನ್ನೂ 6 ಪ್ರಕರಣಗಳು ಬಾಕಿ ಇವೆ.

ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರ ಪ್ರಶ್ನೆಗೆ ಕಂದಾಯ ಸಚಿವ ಆರ್. ಅಶೋಕ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ. 2019-20 ರಲ್ಲಿ ಒಟ್ಟು 42 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಇದರಲ್ಲಿ 10 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. 32 ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ. ಬೀದರ್ ತಾಲ್ಲೂಕಿನಲ್ಲಿ 11, ಭಾಲ್ಕಿ ತಾಲ್ಲೂಕಿನಲ್ಲಿ 9, ಬಸವಕಲ್ಯಾಣ ತಾಲ್ಲೂಕಿನಲ್ಲಿ 3, ಹುಮನಾಬಾದ್ ತಾಲ್ಲೂಕಿನಲ್ಲಿ 10 ಮತ್ತು ಔರಾದ್ ತಾಲ್ಲೂಕಿನಲ್ಲಿ 9 ಪ್ರಕರಣಗಳು ವರದಿಯಾಗಿದ್ದವು.

2020-21 ರಲ್ಲಿ ಒಟ್ಟು 37 ಪ್ರಕರಣಗಳು ವರದಿಯಾಗಿದ್ದವು. ಇದರಲ್ಲಿ 13 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. 18 ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ. ಇನ್ನೂ 6 ಪ್ರಕರಣಗಳು ಬಾಕಿ ಇವೆ. ಬೀದರ್ ತಾಲ್ಲೂಕಿನಲ್ಲಿ 2, ಭಾಲ್ಕಿಯಲ್ಲಿ 5, ಬಸವಕಲ್ಯಾಣದಲ್ಲಿ 12, ಹುಮನಾಬಾದ್‍ನಲ್ಲಿ 9 ಮತ್ತು ಔರಾದ್ ತಾಲ್ಲೂಕಿನಲ್ಲಿ 8 ಪ್ರಕರಣಗಳು ವರದಿಯಾಗಿದ್ದವು ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ.

ಔರಾದ್ ತಾಲ್ಲೂಕಿನ ನಾಗನಪಲ್ಲಿ ಗ್ರಾಮದ ರೈತ ರಾಚಪ್ಪ ಶಂಕರರಾವ್ ಎಂಬುವರು 2019 ರ ಮಾರ್ಚ್ 11 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಈ ಕುರಿತು ಕೃಷಿ ಇಲಾಖೆಗೆ 2020ರ ಜುಲೈ 31 ರಂದು ಅರ್ಜಿ ಸಲ್ಲಿಸಲಾಗಿತ್ತು. ಸರ್ಕಾರದ ಆದೇಶದಂತೆ 6 ತಿಂಗಳು ಮೇಲ್ಪಟ್ಟು ಅರ್ಜಿ
ಸಲ್ಲಿಸಿದ್ದಲ್ಲಿ ಪರಿಹಾರಕ್ಕೆ ಪರಿಗಣಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT