ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಮನಾಬಾದ್‌: 82 ಪ್ರಕರಣ, 38 ಆರೋಪಿಗಳ ಬಂಧನ

Published : 7 ಆಗಸ್ಟ್ 2024, 15:54 IST
Last Updated : 7 ಆಗಸ್ಟ್ 2024, 15:54 IST
ಫಾಲೋ ಮಾಡಿ
Comments

ಹುಮನಾಬಾದ್‌: ಹುಮನಾಬಾದ್ ಪೊಲೀಸ್ ಉಪ ವಿಭಾಗದ ವಿವಿಧ ಠಾಣೆಗಳಲ್ಲಿ ಕಳೆದ ಒಂದು ವರ್ಷದಿಂದ ದಾಖಲಾಗಿದ್ದ 82 ಪ್ರಕರಣಗಳನ್ನು ಭೇದಿಸಿದ ಪೊಲೀಸರು 2.97 ಕೋಟಿ ಮೌಲ್ಯದ ಸ್ವತ್ತು ಜಪ್ತಿ ಮಾಡಿ, 38 ಆರೋಪಿಗಳನ್ನು ಬಂಧಿಸಿದ್ದಾರೆ.

ದನಗಳ ಕಳ್ಳತನ, ವಿದೇಶಿ ಹಣ, ವಾಹನಗಳು, ಅಂಬರ ಗ್ರೀಸ್, ರೈತರ ಪಂಪ್‌ಸೆಟ್, ಮದ್ಯ ಜಪ್ತಿ, ಬೆಳ್ಳಿ ಬಂಗಾರ ಆಭರಣಗಳನ್ನು ಇದರಲ್ಲಿ ಸೇರಿವೆ ಎಂದು ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ತಿಳಿಸಿದರು.

₹ 56.45 ಲಕ್ಷ ಮೌಲ್ಯದ 826.45 ಗ್ರಾಂ ಚಿನ್ನಾಭರಣ, ₹ 9,900 ಮೌಲ್ಯದ ಬೆಳ್ಳಿ, ₹ 3.25 ಲಕ್ಷ ಮೌಲ್ಯದ 10 ಜಾನುವಾರು, ₹ 37.56 ಲಕ್ಷ ನಗದು ಹಣ, ₹21.75 ಲಕ್ಷ ಮೌಲ್ಯದ ವಿದೇಶಿ ಹಣ, ₹ 55.60 ಲಕ್ಷ ಮೌಲ್ಯದ 54 ವಾಹನಗಳು, ₹ 1 ಕೋಟಿ ಬೆಲೆ ಬಾಳುವ 980 ಗ್ರಾಂ ಅಂಬರ ಗ್ರೀಸ್, ₹ 95 ಸಾವಿರದ ಮೌಲ್ಯದ 6 ಪಂಪ್‌ಸೆಟ್, ₹1.75 ಲಕ್ಷ ಅಕ್ರಮ ಮದ್ಯ, 19.95 ಲಕ್ಷ ಮೌಲ್ಯದ ಬಟ್ಟೆಗಳು ಪತ್ತೆ ಹಚ್ಚಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಿಪಿಐಗಳಾದ ಗುರು ಪಾಟೀಲ , ಶ್ರೀನಿವಾಸ ಅಲ್ಲಾಪೂರೆ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT