ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಕ್ಷೇತ್ರ ಬೆಳವಣಿಗೆಗೆ ಪ್ರತ್ಯೇಕ ಸಚಿವಾಲಯ ಸಹಕಾರಿ: ಅಭಿಮತ

Last Updated 11 ಜುಲೈ 2021, 16:41 IST
ಅಕ್ಷರ ಗಾತ್ರ

ಬೀದರ್: ಕೇಂದ್ರ ಸರ್ಕಾರ ರಚಿಸಿರುವ ಪ್ರತ್ಯೇಕ ಸಹಕಾರ ಸಚಿವಾಲಯವು ಸಹಕಾರ ಚಳವಳಿ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಹೇಳಿದರು.

ದೇಶದಲ್ಲಿ ಸಹಕಾರ ಚಳವಳಿಗೆ 117 ವರ್ಷಗಳ ಸುದೀರ್ಘ ಇತಿಹಾಸ ಇದೆ. ಸಹಕಾರ ಕ್ಷೇತ್ರ ದೇಶದ ಶೇ 95 ರಷ್ಟು ಅಂದರೆ 6.30 ಲಕ್ಷ ಗ್ರಾಮಗಳನ್ನು ವ್ಯಾಪಿಸಿದೆ. 6.5 ಲಕ್ಷ ವಿವಿಧ ಸಹಕಾರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈವರೆಗೆ ಆಳಿದ ಸರ್ಕಾರಗಳು ಸಹಕಾರ ಕ್ಷೇತ್ರದ ಕೊಡುಗೆಯನ್ನು ಗುರುತಿಸುವಲ್ಲಿ ವಿಫಲವಾಗಿದ್ದವು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಮಹತ್ವ ಕೊಟ್ಟು ಪ್ರತ್ಯೇಕ ಸಚಿವಾಲಯ ರಚಿಸಿರುವುದರಿಂದ ಜನರ ಅಭಿವೃದ್ಧಿಗೆ ನೆರವಾಗಲಿದೆ ಎಂದು ಹೇಳಿದರು.

ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ನಿರ್ದೇಶಕರಾದ ರಾಜಶೇಖರ ನಾಗಮೂರ್ತಿ, ಜಗನ್ನಾಥ ಕರಂಜೆ, ಶಿವಬಸಪ್ಪ ಚನ್ನಮಲ್ಲೆ, ಶ್ರೀಕಾಂತ ಸ್ವಾಮಿ ಸೋಲಪುರ, ಸಂಜಯ್ ಕ್ಯಾಸಾ, ಕ್ರಾಂತಿಕುಮಾರ, ಶಿವಾನಂದ ಮಂಠಾಳಕರ್, ಸುಭಾಷ ಶೆಡೋಳೆ, ಬಸವರಾಜ ಸ್ವಾಮಿ, ಸೂರ್ಯಕಾಂತ ಮಠಪತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮೃತ ಹೊಸಮನಿ, ಜಿಲ್ಲಾ ಸಂಯೋಜಕ ವೀರಶೆಟ್ಟಿ ಕಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT