ಯುವತಿಯು ಆಗಸ್ಟ್ 29ರಂದು ನಸುಕಿನಲ್ಲಿ ಮನೆಯಿಂದ ಕಾಣೆ ಆಗಿದ್ದರು. ಈ ಸಂಬಂಧ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಆದರೆ ಸೆಪ್ಟೆಂಬರ್ 1 ರಂದು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಪಕ್ಕದಲ್ಲಿನ ಮುಳ್ಳಿನ ಪೊದೆಯಲ್ಲಿ ಭಾಗ್ಯಶ್ರೀ ಮೃತದೇಹ ಸಿಕ್ಕಿದೆ. ಮೃತದೇಹ ಕೊಳೆಯುವ ಸ್ಥಿತಿಯಲ್ಲಿ ಇದ್ದುದರಿಂದ ನಾಪತ್ತೆ ಆಗಿದ್ದ ದಿನವೇ ಕೊಲೆ ಆಗಿದೆ ಎಂದು ಶಂಕಿಸಲಾಗಿದೆ. ಅಂದು ನಸುಕಿನಲ್ಲಿ ಬಹಿರ್ದೆಸೆಗೆ ಹೋಗಿರಬಹುದು. ಆಗ ಅಪರಿಚಿತರು ದುರುದ್ದೇಶದಿಂದ ಕೊಲೆ ಮಾಡಿದ್ದಾರೆ ಎಂದು ಯುವತಿಯ ತಂದೆ ಪಂಡಿತ್ ಆಲಗೂಡೆ ಠಾಣೆಗೆ ದೂರು ಸಲ್ಲಿಸಿದ್ದಾರೆ.