ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿ ದೊರೆಗೆ ಅಲ್‌ ಕೈದಾ ಎಚ್ಚರಿಕೆ

Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

ದುಬೈ: ಸೌದಿ ಅರೇಬಿಯಾದ ಸುಧಾರಣಾವಾದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರಿಗೆ ಅಲ್‌ ಕೈದಾ ಉಗ್ರರು ಎಚ್ಚರಿಕೆ ನೀಡಿದ್ದಾರೆ.

ಮಹಿಳೆಯರು ವಾಹನ ಚಲಾಯಿಸುವುದಕ್ಕೆ ಹಾಗೂ ಸಿನಿಮಾ ಪ್ರದರ್ಶನಗಳಿಗೆ ಹೇರಿದ್ದ ನಿರ್ಬಂಧಗಳನ್ನು ಮೊಹಮ್ಮದ್‌ ಹಿಂತೆಗೆದುಕೊಂಡಿದ್ದರು.

‘ದೊರೆಯ ಆಡಳಿತದಲ್ಲಿ ಮಸೀದಿಗಳನ್ನು ಸಿನಿಮಾ ಮಂದಿರಗಳನ್ನಾಗಿ ಪರಿವರ್ತಿಸಲಾಗಿದೆ. ಇಮಾಮ್‌ಗಳ ಪುಸ್ತಕಗಳನ್ನು ಬದಲಿಸಲಾಗಿದೆ’ ಎಂದು ಯೆಮೆನ್‌ ಮೂಲದ ಜಿಹಾದಿ ಗುಂಪಿನ ಉಗ್ರರು ಹೇಳಿರುವುದಾಗಿ ಮದಾದ್‌ ಪತ್ರಿಕೆ ವರದಿ ಮಾಡಿದೆ.

‘ಪೂರ್ವ ಮತ್ತು ಪಶ್ಚಿಮದ ಜಾತ್ಯತೀತರನ್ನು ಸೌದಿ ಅರೇಬಿಯಾ ಮುಕ್ತವಾಗಿ ಸ್ವಾಗತಿಸುತ್ತಿದೆ. ನೈತಿಕತೆ ಅವನತಿಯತ್ತ ಸಾಗುತ್ತಿದೆ’ ಎಂದೂ ಉಗ್ರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT