ಶನಿವಾರ, ಮೇ 15, 2021
25 °C

ಕೋವಿಡ್‌ ನಿಯಂತ್ರಣಕ್ಕೆ ನಕಲಿ ಇಂಜೆಕ್ಷನ್ ಬಳಕೆ: ಎಚ್‌.ಡಿ ಕುಮಾರಸ್ವಾಮಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ (ಬೀದರ್‌ ಜಿಲ್ಲೆ): ‘ಕೆಲ ಆಸ್ಪತ್ರೆಗಳಲ್ಲಿ ಕೋವಿಡ್‌ ನಿಯಂತ್ರಣಕ್ಕೆ ನಕಲಿ ಇಂಜೆಕ್ಷನ್ ನೀಡುತ್ತಿರುವುದು ಗೊತ್ತಾಗಿದೆ. ರೋಗದ ಭಯಾನಕತೆ ತೋರಿಸಿ ಹಣ ಸೆಳೆಯುವ ದಂಧೆ ಆರಂಭ ಆಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಾಸಗಿ ಆಸ್ಪತ್ರೆಗಳ ವಿರುದ್ಧ ಹರಿಹಾಯ್ದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹10 ಸಾವಿರಕ್ಕೊಂದು ಇಂಜೆಕ್ಷನ್ ನೀಡುತ್ತಿರುವ ಬಗ್ಗೆ ಹೇಳಲಾಗುತ್ತಿದೆ. ಮಾತ್ರೆಗಳ ಕೊರತೆಯೂ ಆಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆ ಆಯೋಜಿಸಲು ನಿರ್ಣಯಿಸಿರುವುದು ಉತ್ತಮವೇ. ಆದರೆ, ತಜ್ಞರಿಂದ ಸಲಹೆ ಪಡೆಯುವುದನ್ನು ಬಿಟ್ಟು ನಮ್ಮಂಥ ರಾಜಕಾರಣಿಗಳಿಂದ ಅವರೇನು ಸಲಹೆ ಪಡೆಯುತ್ತಾರೆ’ ಎಂದು ಪ್ರಶ್ನಿಸಿದರು.

‘ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು. ಕೋವಿಡ್ ನಿಯಮಾವಳಿ ಜಾರಿಗೊಳಿಸಿದ ಬಿಜೆಪಿಯವರೇ ಚುನಾವಣೆಯ ದೊಡ್ಡ ದೊಡ್ಡ ಸಭೆಗಳನ್ನು ಆಯೋಜಿಸಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ’ ಎಂದು ಆರೋಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು