ಶನಿವಾರ, ಜುಲೈ 24, 2021
26 °C
ಇನ್ನೂ ಬರಬೇಕಿದೆ 3171 ಜನರ ವೈದ್ಯಕೀಯ ವರದಿ

ಬೀದರ್ | ಮತ್ತೆ 29 ಮಂದಿಗೆ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜಿಲ್ಲೆಯಲ್ಲಿ ಬುಧವಾರ ಮತ್ತೆ 29 ಮಂದಿಗೆ ಕೋವಿಡ್‌– 19 ತಗುಲಿದೆ. ಕೋವಿಡ್ ಪೀಡಿತರ ಸಂಖ್ಯೆ 879ಕ್ಕೆ ಏರಿದೆ.

ಬುಧವಾರ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಔರಾದ್‌ನಲ್ಲಿ ಮಂಗಳವಾರ ಮೃತಪಟ್ಟ ವೃದ್ಧನ ವೈದ್ಯಕೀಯ ವರದಿ ಬಂದಿಲ್ಲ. 3171 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ವರದಿ ಬರಬೇಕಿದೆ.

ಬ್ರಿಮ್ಸ್ ಆಸ್ಪತ್ರೆ ವಿಶೇಷ ಚಿಕಿತ್ಸಾ ಘಟಕದಿಂದ ಬುಧವಾರ ಒಬ್ಬರೇ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಬೀದರ್‌ ತಾಲ್ಲೂಕಿನಲ್ಲಿ 12, ಭಾಲ್ಕಿಯಲ್ಲಿ 11, ಹುಮನಾಬಾದ್‌ನಲ್ಲಿ ಐವರು ಹಾಗೂ ಔರಾದ್‌ನಲ್ಲಿ ಇಬ್ಬರಿಗೆ ಕೋವಿಡ್‌ ತಗುಲಿದೆ. ಸೋಂಕಿತರಲ್ಲಿ 15 ಮಹಿಳೆಯರು, 13 ಪುರುಷರು, ಒಬ್ಬ ಬಾಲಕ, ಇಬ್ಬರು ಬಾಲಕಿಯರು ಇದ್ದಾರೆ.

ಬೀದರ್‌ ನಗರದ ನೂರಖಾನ್‌ ತಾಲೀಂ, ನಾವದಗೇರಿ ಹಾಗೂ ಗುಂಪಾದ 22, 28, 70, 28, 29, 25 ಹಾಗೂ 19 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. 36, 24, 28 ವರ್ಷದ ಮಹಿಳೆಯರು ಹಾಗೂ 7, 8 ವರ್ಷದ ಇಬ್ಬರು ಬಾಲಕಿಯರಿಗೆ ಸೋಂಕು ತಗುಲಿದೆ. ಔರಾದ್‌ನ 45 ವರ್ಷದ ಮಹಿಳೆ, ಹುಮನಾಬಾದ್ ತಾಲ್ಲೂಕಿನ 45, 46, 51, 68 ವರ್ಷದ ಮಹಿಳೆ , 35 ವರ್ಷದ ಪುರಷರೊಬ್ಬರಿಗೆ ಕೋವಿಡ್ –19 ದೃಢಪಟ್ಟಿದೆ.

ಭಾಲ್ಕಿ ಪಟ್ಟಣದ ತೀನ್ ದುಕಾನ್ ಗಲ್ಲಿಯ 48, 75 ವರ್ಷದ ಮಹಿಳೆ, 22 ವರ್ಷದ ಯುವಕ, ಸರ್ಕಾರಿ ಆಸ್ಪತ್ರೆಯ 35, 39 ವರ್ಷದ ಮಹಿಳಾ ನರ್ಸಿಂಗ್ ಸಿಬ್ಬಂದಿ ಸೇರಿದಂತೆ ತಾಲ್ಲೂಕಿನ ಕುರುಬಖೇಳಗಿ ಗ್ರಾಮದ 45 ವರ್ಷದ ಪುರುಷ, ಕೆರೂರ ಗ್ರಾಮದ 10 ವರ್ಷದ ಬಾಲಕ, ಇಂಚೂರದ 46 ವರ್ಷದ ಪುರುಷ, ಲಖನಗಾಂವದ 47 ವರ್ಷದ ಪುರುಷ, ಮಳಚಾಪುರದ 24 ವರ್ಷದ ಯುವತಿ, ತಳವಾಡದ 21 ವರ್ಷದ ಯುವತಿಗೆ ಸೋಂಕು ತಗುಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು