ಭಾಲ್ಕಿ: ‘ದೇಶದ ಎಲ್ಲ ಗ್ರಾಮಗಳ, ಕೃಷಿ ಕ್ಷೇತ್ರದ ಅಭಿವೃದ್ಧಿಯಿಂದಲೇ ಮಾತ್ರ ದೇಶ ಅಭಿವೃದ್ಧಿ ಆಗುತ್ತದೆಯೇ ಹೊರತು ಐಟಿ, ಬಿಟಿಯಿಂದಲ್ಲ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಗೀರ ಹೇಳಿದರು.
ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೀದರ್ ವತಿಯಿಂದ ಸೇವಾ ಭಾರತೀಯ ಯೋಜನೆ ಅಡಿ ಯಲ್ಲಿ ಕೃಷಿಕರಿಗೆ ಉಚಿತವಾಗಿ ಕೃಷಿ ಉಪಕರಣ ಗಳನ್ನು ವಿತರಿಸಿ ಮಾತನಾಡಿದರು.
‘ಕೃಷಿಯಲ್ಲಿ ಅಭಿವೃದ್ಧಿ ಸಾಧಿಸದೆ ದೇಶದ ಪ್ರಗತಿ ಆಗಲು ಸಾಧ್ಯವಿಲ್ಲ. ರೈತರು ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಅತಿಯಾದ ಬಳಕೆಯಿಂದ ನಿರಂತರವಾಗಿ ಭೂಮಿಯನ್ನು ಹಾಳು ಮಾಡುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ‘ಎಲ್ಲ ರೈತರು ಒಂದೇ ಬೆಳೆ ಬೆಳೆದರೆ ನಿರೀಕ್ಷಿತ ಬೆಲೆ ಸಿಗುವುದಿಲ್ಲ. ಹಾಗಾಗಿ, ಇರುವ ಭೂಮಿಯಲ್ಲಿಯೇ ಎಲ್ಲ ರೀತಿಯ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು’ ಎಂದರು.
ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ‘ದೇಶದ ಬೆನ್ನೆಲುಬು ಕೃಷಿ. ಹಸುವಿನ ಒಂದು ಗ್ರಾಂ ಸೆಗಣಿ ಮೂರು ಸಾವಿರ ಜೀವಾಣುವನ್ನು ಒಳಗೊಂಡಿರರುತ್ತದೆ. ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳಲು ಸಾವಯುವ ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕು’ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಶಿವಲಿಂಗ ಕುಂಬಾರ, ಕೃಷ್ಣಾ ಜೋಷಿ, ವಿಜಯ ಮಹಾಂತೇಶ, ಭಾರ್ಗವಚಾರಿ, ರೇಕುನಾಯಕ, ಸುದೀಪ ಬೇಲೂರೆ, ವರುಣ ಗಾಮಾ, ಪವನ ಬಿರಾದಾರ, ಸುರೇಶ ವಾಡೆ, ಮಹಾಂತೇಶ ಪಾಟೀಲ, ಸಂಗಮೇಶ ಸೋಲಾಪುರೆ, ಸಚಿನ್ ಮೆಳಕುಂದೆ, ಸಂಜು ಉಚಾಟೆ, ಶಾಂತವೀರ ಕೇಸ್ಕರ, ವಿಜಯಕುಮಾರ ಭೊರಾಳೆ, ಕಾಂತು ರೊಡ್ಡೆ, ಖುಶಾಲ ಠಾಕೂರ್, ವಿಶ್ವಾ ಹೂಗಾರ, ಮಹೇಶ ಗಾಮಾ, ವಿಶಾಲ ಕುಟಮುಲಗೆ ಉಪಸ್ಥಿತರಿದ್ದರು.
ಮಹೇಶ ರಾಚೋಟ್ಟೆ ಪ್ರಾಸ್ತಾವಿಕ ಮಾತನಾಡಿದರು. ಸತೀಶ ಬಿರಾದಾರ ಸ್ವಾಗತಿಸಿ, ಚಂದ್ರಕಾಂತ ತಳವಾಡೆ ನಿರೂ ಪಿಸಿ, ಸತೀಶ ಮುದ್ದಾಳೆ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.