ಸೋಮವಾರ, ಡಿಸೆಂಬರ್ 16, 2019
26 °C

ಹುಮನಾಬಾದ್‌: ಏಡ್ಸ್‌ ಜಾಗೃತಿ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ಎಚ್‍ಕೆಡಿಇಟಿ ಸಂಚಾಲಿತ ದಂತ ಮಹಾವಿದ್ಯಾಲಯದ ಸಮುದಾಯ ಚಿಕಿತ್ಸಾ ವಿಭಾಗದ ವತಿಯಿಂದ ಭಾನುವಾರ ವಿಶ್ವ ಏಡ್ಸ್‌ ದಿನ ಆಚರಿಸಲಾಯಿತು.

ಪಟ್ಟಣದ ಕಲ್ಲೂರ ಮಾರ್ಗದಿಂದ ಬಸ್ ನಿಲ್ದಾಣದವರೆಗೆ ರ‍್ಯಾಲಿ ನಡೆಸಿದರು. ಪ್ರಾಚಾರ್ಯ ವಿನಯಕುಮಾರ ಚಾಲನೆ ನೀಡಿದರು. ಕಾಲೇಜಿನ ವಿದ್ಯಾರ್ಥಿಗಳು ಏಡ್ಸ್ ಕುರಿತು ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು, ಕರಪತ್ರಗಳನ್ನು ಹಂಚಿದರು.

ಬಸ್ ನಿಲ್ದಾಣದ ಮುಂಭಾಗದಲ್ಲಿ  ನೃತ್ಯ ಮತ್ತು ನಾಟಕ ಪ್ರದರ್ಶಿಸುವ ಮೂಲಕ ಜನರಲ್ಲಿ ಏಡ್ಸ್‌ ಕುರಿತು ಜಾಗೃತಿ ಮೂಡಿಸಿದರು. ಕಾಲೇಜಿನ ಸಮುದಾಯ ಚಿಕಿತ್ಸಾ ವಿಭಾಗದ ಪ್ರಮುಖರಾದ ಡಾ.ಸುಧೀರ ಹೊಂಗಲ್, ಡಾ.ಮಯೂರಿ ಸೇರಿದಂತೆ ಕಾಲೇಜಿನ ಸುಮಾರು 200 ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.

ಪ್ರತಿಕ್ರಿಯಿಸಿ (+)