ಗುರುವಾರ , ಡಿಸೆಂಬರ್ 8, 2022
18 °C

‘ಬಿಜೆಪಿ ಗೆಲ್ಲಿಸುವುದೇ ಗುರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿ’ ಎಂದು ಪಕ್ಷದ ಜಿಲ್ಲಾ ಮುಖಂಡ ಪ್ರದೀಪ ವಾತಡೆ ಹೇಳಿದರು.

ತಾಲ್ಲೂಕಿನ ಯದ್ಲಾಪುರದಲ್ಲಿ ಶುಕ್ರವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಕಾರ್ಯಕರ್ತರ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೇಂದ್ರದಲ್ಲಿನ ಮೋದಿ ಸರ್ಕಾರ ಹಾಗೂ ರಾಜ್ಯದ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಬಡವರ, ರೈತರ ಪರವಾದ ಯೋಜನೆಗಳನ್ನು ಜಾರಿಗೊಳಿಸಿವೆ. ಕಾಂಗ್ರೆಸ್ ಮುಳುಗುವ ಹಡಗಾಗಿದೆ. ಜೆಡಿಎಸ್‌ಗೆ ಭವಿಷ್ಯವಿಲ್ಲ. ಆದ್ದರಿಂದ ಪಕ್ಷದ ಜನಪ್ರಿಯತೆ ಎಲ್ಲೆಡೆ ಹೆಚ್ಚುತ್ತಿದ್ದು, ಅನೇಕರು ಈ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ವಿಶೇಷವಾಗಿ ಯುವಕರು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಬಯಸುತ್ತಿದ್ದಾರೆ’ ಎಂದರು.

ಶಿವಕುಮಾರ ಅಮರಶೆಟ್ಟಿ ಹಾಗೂ ಅಮರ ಬಡದಾಳೆ ಮಾತನಾಡಿದರು.

ಪೋಪಟ್ ಜಮಾದಾರ, ಡಾ.ವೈಜನಾಥ ಭಂಡಾರಿ, ನೀಲಕಂಠ ಶೀಲವಂತ, ಪ್ರಭು ಕಾಡಾದಿ, ಆನಂದ ಜೀವಣೆ, ಸುರೇಶ ಜಮ್ಮು ಇದ್ದರು.

ಸಂತೋಷ ಗೋಡಬೊಲೆ ಮುಚಳಂಬ, ಅಜಯ, ರಾಹುಲ್, ಸಚಿನ್, ಭಜರಂಗ ಲಿಂಬಾಪುರ, ಕಿಶನ ಗಾಯಕವಾಡ, ರಜನಿಕಾಂತ ಶಿಂಧೆ, ಗೌತಮ ಸಿಂಧೆ, ರೋಹಿದಾಸ ಯದ್ಲಾಪುರ, ಸುಮೀತ, ಲಕ್ಷ್ಮಣ ವಾಡೆಕರ್, ವೆಂಕಟ ಹಣಕುಣೆ ಒಳಗೊಂಡು ನಾರಾಯಣಪುರ, ಯದ್ಲಾಪುರ, ಮುಚಳಂಬ, ಲಿಂಬಾಪುರ ಮುಂತಾದೆಡೆಯ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು