ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯರೋಗ ಮುಕ್ತ ಜಿಲ್ಲೆ ಗುರಿ

ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಹೇಳಿಕೆ
Last Updated 26 ಮಾರ್ಚ್ 2022, 11:33 IST
ಅಕ್ಷರ ಗಾತ್ರ

ಬೀದರ್: ‘2023ರಲ್ಲಿ ಜಿಲ್ಲೆಯನ್ನು ಕ್ಷಯ ರೋಗ ಮುಕ್ತವಾಗಿಸುವ ಗುರಿ ಇಟ್ಟುಕೊಳ್ಳಲಾಗಿದೆ‘ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಹೇಳಿದರು.

ಇಲ್ಲಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸದೃಢ ದೇಶ ಕಟ್ಟಲು ಸದೃಢ ಆರೋಗ್ಯ ಬಹಳ ಮುಖ್ಯವಾಗಿದೆ. ಕ್ಷಯ ರೋಗ ಸಂಪೂರ್ಣ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ತಿಳಿವಳಿಕೆ, ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆ ಮೂಲಕ ಕ್ಷಯ ರೋಗ ನಿಯಂತ್ರಿಸಬಹುದಾಗಿದೆ’ ಎಂದು ತಿಳಿಸಿದರು.
‘ಪ್ರಸಕ್ತ ಸಾಲಿನಲ್ಲಿ 14 ಸಾವಿರ ರೋಗಿಗಳ ಕಫ ಮಾದರಿ ಪರೀಕ್ಷೆ ನಡೆಸಲಾಗಿದೆ. ಇವರಲ್ಲಿ 2 ಸಾವಿರ ಜನರಿಗೆ ಕ್ಷಯ ರೋಗ ದೃಢಪಟ್ಟಿದೆ’ ಎಂದು ಹೇಳಿದರು.

‘ಬೇಗ ಪತ್ತೆ ಹಾಗೂ ತಕ್ಷಣ ಚಿಕಿತ್ಸೆಯಿಂದ ಕ್ಷಯ ರೋಗವನ್ನು ತಡೆಯಬಹುದು’ ಎಂದು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರತಿಕಾಂತ ಸ್ವಾಮಿ ತಿಳಿಸಿದರು.

‘2020-21 ರಲ್ಲಿ ಜಿಲ್ಲೆಯಲ್ಲಿ 1,847 ಮಂದಿ ಕ್ಷಯ ರೋಗಿಗಳನ್ನು ಚಿಕಿತ್ಸೆ ಮೂಲಕ ಗುಣಪಡಿಸಲಾಗಿದೆ. ಕ್ಷಯ ರೋಗಕ್ಕೆ ಎಲ್ಲ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ಲಭ್ಯ ಇದೆ’ ಎಂದು ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ. ಶರಣಯ್ಯ ಸ್ವಾಮಿ ಹೇಳಿದರು.

ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದಲ್ಲಿ ಉತ್ತಮ ಸಾಧನೆಗೈದ ಡಾ. ಸಂಗಾರೆಡ್ಡಿ, ಡಾ. ರಂಗನಾಥ, ಡಾ. ಅಕ್ರಂ ಖುರೇಶಿ, ಡಾ. ಯೋಗೇಶ ಕಾಮಶೆಟ್ಟಿ, ಶ್ರೀಕಾಂತ, ರಾಹುಲ್ ಗಾದಾ, ಶರದ್ ತಾಂದಳೆ, ಪ್ರಶಾಂತ ಗುಪ್ತಾ, ವೆಂಕಟೇಶ, ಸೈಯದ್ ನಾಜಿದುಲ್ಲಾ ಹುಸೇನಿ, ಪ್ರವೀಣಕುಮಾರ, ಪಾರ್ವತಿ ಸೆದ್ದೆ, ಗುರುನಾಥ ಹಾಗೂ ಜಗನ್ನಾಥ, ವಿದ್ಯಾವತಿ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಾಫರ್ ಸಾದಿಕ್, ಐಎಂಎ ಸ್ಥಳೀಯ ಶಾಖೆ ಅಧ್ಯಕ್ಷ ಡಾ. ವಿನೋದ ಸಾವಳಗಿ, ಆರ್‍ಸಿಎಚ್ ಅಧಿಕಾರಿ ಡಾ. ರಾಜಶೇಖರ ಪಾಟೀಲ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಶಂಕರೆಪ್ಪ ಬೊಮ್ಮ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಶಂಕರ ಬಿ, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ಮಹೇಶ ಬಿರಾದಾರ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಸಂಜುಕುಮಾರ ಪಾಟೀಲ, ಡಾ. ಮಹೇಶ ತೊಂಡಾರೆ, ಡಾ. ಭೀಮರಾವ್ ಸಿಂಗೋಡೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ, ಶಿವಕುಮಾರ ಸ್ವಾಮಿ, ಗೌತಮ, ಸಂಜುಕುಮಾರ, ಪರಮೇಶ, ಅಶ್ವಿನಿ, ಸಂತಗೊಂಡ, ಶಿವಕುಮಾರ ವಗ್ಗೆ, ಅವಿನಾಶ, ಶಂಕರ ವಡ್ಡಿ, ಶೋಭಾಬಾಯಿ ಹಾಗೂ ಶಿವಶಂಕರ ಇದ್ದರು.

ಟಿ.ಎಂ. ಮಚ್ಚೆ ಸ್ವಾಗತಿಸಿ ನಿರೂಪಿಸಿದರು. ಆನಂದ ಪಾಟೀಲ ವಂದಿಸಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT