ತೋಟಗಾರಿಕೆ ನರ್ಸರಿಗೆ ಪರ್ಯಾಯ ಜಾಗ: ಆದಾಯಕ್ಕೆ ಕತ್ತರಿ ಬೀಳುವ ಆತಂಕ

7

ತೋಟಗಾರಿಕೆ ನರ್ಸರಿಗೆ ಪರ್ಯಾಯ ಜಾಗ: ಆದಾಯಕ್ಕೆ ಕತ್ತರಿ ಬೀಳುವ ಆತಂಕ

Published:
Updated:
Deccan Herald

ಬೀದರ್: ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ತೋಟಗಾರಿಕೆ ಇಲಾಖೆಯ ನರ್ಸರಿ ಜಾಗವನ್ನು ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿರುವ ಕಾರಣ ಇಲಾಖೆಯ ಆದಾಯಕ್ಕೆ ಕತ್ತರಿ ಬೀಳುವ ಆತಂಕ ಎದುರಾಗಿದೆ.

ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣವನ್ನು ನಗರದಲ್ಲೇ ಮಾಡಬೇಕು ಎನ್ನುವ ಸಾರ್ವಜನಿಕರ ಒತ್ತಡಕ್ಕೆ ಮಣಿದು ಜಿಲ್ಲಾ ಆಡಳಿತವು ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡು ಕಟ್ಟಡ ನಿರ್ಮಾಣ ಮಾಡಲು ತೀರ್ಮಾನಿಸಿದೆ. ನಗರ ಪ್ರದೇಶದಲ್ಲಿ ಪರ್ಯಾಯ ಜಾಗ ಒದಗಿಸಿ ತನ್ನ ಜಾಗವನ್ನು ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆ ಷರತ್ತು ಹಾಕಿರುವುದರಿಂದ ಬೇರೆ ಬೇರೆ ಜಾಗವನ್ನು ತೋರಿಸಿದೆ.

ಜಿಲ್ಲಾ ಆಡಳಿತವು ನಗರದಲ್ಲಿ ಮೂರು ಕಡೆ ಇರುವ ಜಾಗಗಳ ಪಟ್ಟಿಯನ್ನು ತೋಟಗಾರಿಕೆ ಇಲಾಖೆಗೆ ನೀಡಿದೆ.
ಮೋಹನ ಮಾರ್ಕೆಟ್‌ ಸಮೀಪದ ಎಲ್‌ಐಸಿ ಕಚೇರಿ ಮುಂದಿನ ಉದ್ಯಾನಕ್ಕೆ ಮೀಸಲಿಟ್ಟ ಜಾಗ ಒಪ್ಪಿಗೆಯಾದರೆ ಅದನ್ನೂ ಕೊಡಲು ಸಿದ್ಧ ಎಂದು ಸ್ಪಷ್ಟಪಡಿಸಿದೆ.

ಉದ್ಯಾನದಲ್ಲಿ ಜಾಗ ಅತಿಕ್ರಮಣ ಮಾಡಿ ಎರಡು ದೇವಸ್ಥಾನಗಳನ್ನು ಕಟ್ಟಲಾಗಿದೆ. ಉದ್ಯಾನದಲ್ಲಿ ಒಂದು ಓವರ್‌ಹೆಡ್‌ ಟ್ಯಾಂಕ್‌ ಸಹ ಇದೆ. ಹೀಗಾಗಿ ಸಮಸ್ಯೆ ಜಟಿಲವಾಗಿದೆ. ಜಿಲ್ಲಾಡಳಿತ ಅತಿಕ್ರಮಣ ತೆರವುಗೊಳಿಸುವ ಭರವಸೆ ನೀಡಿದೆ.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಜಯಶ್ರೀ ಕಲ್ಯಾಣ, ನಗರಸಭೆಯ ಆಯುಕ್ತ ಮನೋಹರ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಸ್ಪರ ಒಪ್ಪಿಗೆ ಹಾಗೂ ಹಸ್ತಾಂತರದ ವಿಷಯ ಪ್ರಸ್ತಾಪವಾಗಿಲ್ಲ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಾಧಕ, ಬಾಧಕಗಳನ್ನು ನೋಡಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಅತಿ ಹೆಚ್ಚು ಸಸಿಗಳ ಮಾರಾಟ
ಜಿಲ್ಲಾಧಿಕಾರಿ ಕಚೇರಿ ಮಂದಿನ ನರ್ಸರಿಯಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ತೋಟಗಾರಿಕೆ ಸಸಿಗಳು ಮಾರಾಟವಾಗುತ್ತವೆ. ಜಿಲ್ಲಾ ಕೇಂದ್ರಕ್ಕೆ ಬರುವ ರೈತರು ಕಚೇರಿ ಹಾಗೂ ಖಾಸಗಿ ಕೆಲಸಗಳನ್ನು ಮುಗಿಸಿಕೊಂಡು ಇಲ್ಲಿಂದ ಸಸಿ ಖರೀದಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ.

1.20 ಎಕರೆ ಜಾಗದಲ್ಲಿ ವಿವಿಧ ಹೂವು, ಹಣ್ಣು ಹಾಗೂ ಆಲಂಕಾರಿಕ ಸಸಿಗಳನ್ನು ಬೆಳೆಸಲಾಗುತ್ತಿದೆ. ಕಳೆದ ವರ್ಷ 1 ಲಕ್ಷ ತರಕಾರಿ ಸಸಿ, 7 ಸಾವಿರ ಮಾವು, 3 ಸಾವಿರ ಗೋಡಂಬಿ, 20 ಸಾವಿರ ಆಲಂಕಾರಿಕ ಸಸಿಗಳನ್ನು ಮಾರಾಟ ಮಾಡಲಾಗಿದೆ.

‘ಕಳೆದ ವರ್ಷ ಇದೊಂದೇ ತೋಟದಿಂದ ಮಾವಿನ ಸಸಿ ಮಾರಾಟದಿಂದ ₹ 50 ಸಾವಿರ, ಕರಿಬೇವಿನಿಂದ ₹ 2 ಸಾವಿರ ಹಾಗೂ ಅಲಂಕಾರಿಕ ಸಸಿಗಳ ಮಾರಾಟದಿಂದ ₹ 20 ಸಾವಿರ ಆದಾಯ ಸಂಗ್ರಹವಾಗಿದೆ. ಒಟ್ಟು ₹ 5 ಲಕ್ಷ ಆದಾಯ ಬಂದಿದೆ’ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಜಯಶ್ರೀ ಕಲ್ಯಾಣ ಹೇಳುತ್ತಾರೆ.

‘ಸ್ಥಳಾಂತರದ ನಂತರ ಸಹಜವಾಗಿಯೇ ಇಲಾಖೆಯ ಆದಾಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಹೊಸ ತೋಟವನ್ನು ಅಭಿವೃದ್ಧಿ ಪಡಿಸಲು ಸಮಯ ಬೇಕಾಗಲಿದೆ. ಗಟ್ಟಿ ನೆಲದಲ್ಲಿ ಸಸಿಗಳನ್ನು ಬೆಳೆಸಲು ಸಾಧ್ಯವಾಗುವುದಿಲ್ಲ. ಹೊರಗಿನಿಂದ ಮಣ್ಣು ತರಬೇಕಾಗುತ್ತದೆ’ ಎನ್ನುತ್ತಾರೆ.

‘ಸರ್ಕಾರದ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ಉತ್ತಮವಾದ ಜಾಗ ಕೊಟ್ಟರೆ ಅಲ್ಲಿ ಮತ್ತೆ ತೋಟಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿದ್ದೇವೆ’ ಎಂದು ಹೇಳುತ್ತಾರೆ.
**
ಜಿಲ್ಲಾಡಳಿತದ ಸೂಚನೆಯಂತೆ ಬೀದರ್‌ ನಗರಸಭೆ ವ್ಯಾಪ್ತಿಯಲ್ಲಿರುವ ಮೂರು ಖಾಲಿ ಜಾಗಗಳನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ತೋರಿಸಲಾಗಿದೆ.
ಮನೋಹರ, ನಗರಸಭೆ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !