ಬೀದರ್: ಕನ್ನಡ ಸಾಹಿತ್ಯದ ಸಮಕಾಲೀನ ಪ್ರವಾಹದಲ್ಲಿ ಗ್ರಾಮೀಣ ಜೀವನದ ವಾಸ್ತವಿಕ ಚಿತ್ರಣವನ್ನು ಕಥೆ, ಕಾದಂಬರಿಗಳ ಮೂಲಕ ಜನಮಾನಸಕ್ಕೆ ತಲುಪಿಸಿದ ಪ್ರಮುಖ ಲೇಖಕರಲ್ಲಿ ಅಮರೇಶ ನುಗಡೋಣಿ ಕೂಡ ಒಬ್ಬರು.

ಸಮಾಜದಲ್ಲಿರುವ ಅಂಚಿನ ಜನರ ವಾಸ್ತವಿಕ ಬದುಕು ಅತ್ಯಂತ ಸರಳ ಭಾಷೆಯಲ್ಲಿ ಕಟ್ಟಿಕೊಡುವ ಚಾಕಚಾಕ್ಯತೆ ಇವರದು. ಈ ಕಾರಣಕ್ಕಾಗಿಯೇ ಇವರ ಸಾಹಿತ್ಯ ಸಾಮಾನ್ಯ ಓದುಗನನ್ನು ಸೂಜಿಗಲ್ಲಿನಂತೆ ಸೆಳೆಯುವ ಗುಣ ಹೊಂದಿದೆ. ‘ಮಣ್ಣು ಸೇರಿತು ಬೀಜ’, ‘ತಮಂಧದ ಕೇಡು’, ‘ಸವಾರಿ’, ‘ಒಡಲ ಹಂಗು’, ‘ಚುಕ್ಕಿ ಮದುವೆ ಪ್ರಸಂಗ’, ‘ದಡ ಸೇರಿಸು ತಂದೆ’ ಇವರ ಪ್ರಮುಖ ಕಥಾ ಸಂಕಲನಗಳು. ಇವುಗಳಲ್ಲಿ ಸಾಮಾಜಿಕ ಸಂಘರ್ಷ ಮತ್ತು ಮಾನವೀಯ ಸಂಬಂಧಗಳ ವಿವಿಧ ಆಯಾಮಗಳನ್ನು ಕಾಣಬಹುದು.

‘ದಂಡುಗ’, ‘ಗೌರಿಯರು’ ಕಾದಂಬರಿಗಳು ಸಮಾಜದ ಕೈಗನ್ನಡಿಯಂತಿವೆ. ಇವುಗಳು ಓದುಗರನ್ನು ಆಳ ಚಿಂತನೆಗೆ ಒಳಪಡಿಸುವ ಶಕ್ತಿ ಹೊಂದಿವೆ. ವಿಮರ್ಶೆ, ಸಂಶೋಧನಾ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ. ಇವರ ಕೆಲವು ಕಥೆಗಳು ರಂಗ ಪ್ರಯೋಗ ಕಂಡಿವೆ. ಸಿನಿಮಾಗಳಾಗಿ ಪ್ರದರ್ಶನ ಕಂಡಿವೆ. ಇವರ ಕಥೆ ಆಧರಿಸಿದ ‘ನೀರು ತಂದವರು’ ಚಲನಚಿತ್ರ ರಾಜ್ಯಮಟ್ಟದ ಪ್ರಶಸ್ತಿಗೆ ಪಾತ್ರವಾಗಿದೆ. ‘ಕನಸೆಂಬೊ ಕುದುರೆಯನೇರಿ’, ‘ದೈವಕ್ಕೆ ಮೊದಲು ಶರಣೆಂಬೆವು’ ಇವರ ಕಥೆ ಆಧರಿಸಿದ ಚಿತ್ರಗಳು.

ಮೃದು ಮತ್ತು ಮಿತಭಾಷಿಯಾಗಿರುವ ಅಮರೇಶ ನುಗಡೋಣಿ ಅವರು ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ನುಗಡೋಣಿ ಗ್ರಾಮದವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಲೇ ಅನೇಕ ಕಥೆ, ಕಾದಂಬರಿಗಳನ್ನು ಬರೆದಿದ್ದಾರೆ. ಅನೇಕ ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಕಿರಿಯ ಬರಹಗಾರರಿಗೆ ಬೆನ್ನು ತಟ್ಟಿ, ಹುರಿದುಂಬಿಸುವ ಗುಣ ಹೊಂದಿರುವ ಇವರಿಗೆ ಅನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಮತ್ತೊಂದು ಗರಿ.

ಮಾಸ್ತಿ ಯಶವಂತ ಚಿತ್ತಾಲ ಲಂಕೇಶ್ ವೈದೇಹಿ ನಂತರ ಕಥೆ ವಿಭಾಗದಲ್ಲಿ ನನಗೆ ಪ್ರಶಸ್ತಿ ಬಂದಿರುವುದಕ್ಕೆ ಖುಷಿಯಾಗಿದೆ. ಕಥಾ ಸಾಹಿತ್ಯದಲ್ಲಿ ಸಾಕಷ್ಟು ಶ್ರಮಿಸಿದವರನ್ನು ಗುರುತಿಸಿರುವುದರ ಸಂಕೇತವಿದು. ಇದು ಇಡೀ ಕಥಾ ಸಾಹಿತ್ಯಕ್ಕೆ ಸಂದ ಗೌರವ.
–ಅಮರೇಶ ನುಗಡೋಣಿ, ಕಥೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.