ಅಂಬೇಡ್ಕರ್ ಜಯಂತಿ: ಮಳೆಯಲ್ಲೇ ಬೈಕ್ ರ‍್ಯಾಲಿ

ಶನಿವಾರ, ಏಪ್ರಿಲ್ 20, 2019
29 °C

ಅಂಬೇಡ್ಕರ್ ಜಯಂತಿ: ಮಳೆಯಲ್ಲೇ ಬೈಕ್ ರ‍್ಯಾಲಿ

Published:
Updated:
Prajavani

ಬೀದರ್: ಡಾ. ಬಿ.ಆರ್. ಅಂಬೇಡ್ಕರ್ ಅವರ 128ನೇ ಜಯಂತಿ ಪ್ರಯುಕ್ತ ಭಾರತ ರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ 128ನೇ ಜಯಂತ್ಯುತ್ಸವ ಸಮಿತಿಯ ವತಿಯಿಂದ ನಗರದಲ್ಲಿ ಶುಕ್ರವಾರ ಸಂಜೆ ಮಳೆಯಲ್ಲೇ ಬೈಕ್ ರ‍್ಯಾಲಿ ನಡೆಯಿತು.

ಅಂಬೇಡ್ಕರ್ ಭವನದಿಂದ ಆರಂಭಗೊಂಡ ರ್‌್ಯಾಲಿಯು ಅಂಬೇಡ್ಕರ್ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ಕನ್ನಡಾಂಬೆ ವೃತ್ತ, ಮಡಿವಾಳ ವೃತ್ತ, ಕೇಂದ್ರ ಬಸ್ ನಿಲ್ದಾಣ, ಬರೀದಶಾಹಿ ಉದ್ಯಾನ, ಶಿವನಗರ, ಹಳೆಯ ಆರ್‌ಟಿಒ ಕಚೇರಿ, ಕೆ.ಇ.ಬಿ ರಸ್ತೆ, ಹರಳಯ್ಯ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಶಿವಾಜಿ ವೃತ್ತ, ತಹಶೀಲ್ದಾರ್ ಕಚೇರಿ, ಭಗತಸಿಂಗ್ ವೃತ್ತ, ಬಸವೇಶ್ವರ ವೃತ್ತ, ನಯಾ ಕಮಾನ್, ಪಾಂಡುರಂಗ ಮಂದಿರ, ಗವಾನ್ ಚೌಕ್, ಶಹಾಗಂಜ್ ಕಮಾನ್, ಕ್ರಾಂತಿ ಗಣೇಶ, ಬಿ. ಶಾಮಸುಂದರ ವೃತ್ತದ ಮೂಲಕ ಹಾಯ್ದು ಅಂಬೇಡ್ಕರ್ ವೃತ್ತ ತಲುಪಿ ಸಮಾರೋಪಗೊಂಡಿತು.

ಭಾರತ ರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ 128ನೇ ಜಯಂತ್ಯುತ್ಸವ ಸಮಿತಿಯ ಗೌರವಾಧ್ಯಕ್ಷ ನಾಗೇಂದ್ರ ದಂಡೆ, ಮಾರುತಿ ಬೌದ್ಧೆ, ಅನೀಲಕುಮಾರ ಬೆಲ್ದಾರ್, ಬಾಬುರಾವ್ ಪಾಸ್ವಾನ್, ಫರ್ನಾಂಡೀಸ್ ಹಿಪ್ಪಳಗಾಂವ, ಸುಬ್ಬಣ್ಣ ಕರಕನಳ್ಳಿ, ರಾಜಕುಮಾರ ಶೇರಿಕಾರ ಗಾದಗಿ, ಮೌಲಪ್ಪ ಮಾಳಗೆ, ಸುನೀಲ ಕಡ್ಡೆ, ಯೇಸುದಾಸ ಅಲಿಯಂಬುರ್, ದೇವಿದಾಸ ಚಿಮಕೋಡೆ, ಶಿವಾಜಿ ಮಾನಕರಿ, ಬಕ್ಕಪ್ಪ ದಂಡಿನ, ಮಾರುತಿ ಕಂಟಿ, ಬಸವರಾಜ ಭಾವಿದೊಡ್ಡಿ ಮೊದಲಾದವರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !