ಬಿಜೆಪಿಯಿಂದ ಹಣ ಹಂಚಿಕೆ ವಿಡಿಯೊ ವೈರಲ್‌

ಶುಕ್ರವಾರ, ಮೇ 24, 2019
23 °C

ಬಿಜೆಪಿಯಿಂದ ಹಣ ಹಂಚಿಕೆ ವಿಡಿಯೊ ವೈರಲ್‌

Published:
Updated:

 ಬೀದರ್‌: ಪ್ರಚಾರಕ್ಕೆ ಬರುವಂತೆ ಮಹಿಳೆಯರಿಗೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಆಪ್ತ ಸಹಾಯಕ ಅಮರ ಹಿರೇಮಠ ಹಣ ಹಂಚುತ್ತಿರುವ ವಿಡಿಯೊ ವೈರಲ್‌ ಆಗಿದೆ.

ಇಲ್ಲಿಯ ಶಿವನಗರದ ಭಗವಂತ ಖೂಬಾ ನಿವಾಸದ ಎದುರಲ್ಲೇ ಅವರ ಕಚೇರಿ ಇದೆ. ಕಚೇರಿಗೆ ಬಂದಿದ್ದ ಮಹಿಳೆಯರಿಗೆ ಸರತಿ ಸಾಲಿನಲ್ಲಿ ಹಣ ಹಂಚಿದ ದೃಶ್ಯ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣೆ ಅಧಿಕಾರಿಗಳು ಮಾಧ್ಯಮಗಳಿಂದಲೂ ಸಿಡಿ ಪಡೆದು ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯಾವ ದಿನ ವಿಡಿಯೊ ಮಾಡಲಾಗಿದೆ ಎನ್ನುವುದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ತಿಳಿಸಿದ್ದಾರೆ.

***
ಉಚಿತ ದೂರವಾಣಿ ಸಂಖ್ಯೆಗೆ 32 ಕರೆಗಳು
ಬೀದರ್:
ಲೋಕಸಭಾ ಚುನಾವಣೆ ಪ್ರಯುಕ್ತ ತೆರೆಯಲಾದ 1950 ದೂರವಾಣಿ ಸಂಖ್ಯೆಗೆ ಬುಧವಾರ ಬಂದಿದ್ದ 32 ಕರೆಗಳನ್ನು ಸ್ವೀಕರಿಸಿ ಎರಡು ದೂರುಗಳನ್ನು ದಾಖಲಿಸಲಾಗಿದೆ.

ಸಿ-ವಿಜಿಲ್ ಮೊಬೈಲ್ ತಂತ್ರಾಂಶದಲ್ಲಿ ಒಂದು ದೂರು ದಾಖಲಾಗಿದೆ. ಅಬಕಾರಿ ಇಲಾಖೆಯ ಸಿಬ್ಬಂದಿ ಬುಧವಾರ 18 ಕಡೆಗಳಲ್ಲಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಮದ್ಯ ವಶಪಡಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !