ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಸ್ ಕನಸು ನನಸಾಗಿಸಿದ ‘ಶಾಹೀನ್’

ಆರನೇ ಪ್ರಯತ್ನದಲ್ಲಿ ವೈದ್ಯಕೀಯ ಸೀಟು
Last Updated 22 ಅಕ್ಟೋಬರ್ 2020, 15:35 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆಯ ನೆರವಿನಿಂದ ವೈದ್ಯಕೀಯ ಸೀಟು ಪಡೆಯುವ ಉತ್ತರಪ್ರದೇಶದ ವಿದ್ಯಾರ್ಥಿಯೊಬ್ಬರ ಕನಸು ಕೊನೆಗೂ ನನಸಾಗಿದೆ.

ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ವಸತಿ ಸಹಿತ ದೀರ್ಘ ಕಾಲದ ನೀಟ್ ರಿಪೀಟರ್ ತರಬೇತಿ ಪಡೆದ ಉತ್ತರಪ್ರದೇಶದ ಮುಜಾಫರ್‌ನಗರದ ಜಿಲ್ಲೆಯ ಕುತೆಸ್ರಾ ಗ್ರಾಮದ ಮಹಮ್ಮದ್ ಅನಸ್ ಆರನೇ ಪ್ರಯತ್ನದಲ್ಲಿ ಪ್ರಸಕ್ತ ಸಾಲಿನ ನೀಟ್‍ನಲ್ಲಿ 663 ಅಂಕ (1,876ನೇ ರ್‍ಯಾಂಕ್) ಗಳಿಸಿ ಗಮನ ಸೆಳೆದಿದ್ದಾರೆ.

ಛಲವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ನಿರೂಪಿಸಿದ್ದಾರೆ. ಒಂದೆರಡು ಸೋಲುಗಳಿಂದಲೇ ಗುರಿಯಿಂದ ವಿಮುಖರಾಗುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.

ಅನಸ್, ಸಣ್ಣ ರೈತರಾಗಿರುವ ಮಹಮ್ಮದ್ ಕಾಮಿಲ್ ಅವರ ನಾಲ್ಕನೆಯ ಪುತ್ರ. ಕುಟುಂಬದಲ್ಲೇ ವೈದ್ಯಕೀಯ ಕೋರ್ಸ್‍ಗೆ ಪ್ರವೇಶ ಪಡೆಯಲಿರುವವರಲ್ಲಿ ಮೊದಲಿಗರಾಗಿದ್ದಾರೆ.

‘ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ಒಂದು ವರ್ಷ ಉಚಿತ ನೀಟ್ ತರಬೇತಿಯನ್ನೂ ಕೊಟ್ಟರು. ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ದೊರೆತ ಉತ್ಕøಷ್ಟ ನೀಟ್ ತರಬೇತಿಯಿಂದಾಗಿ ವೈದ್ಯಕೀಯ ಕೊರ್ಸ್‍ಗೆ ಪಡೆಯುವ ನನ್ನ ಆಸೆ ಕೊನೆಗೂ ಈಡೇರಿದೆ’ ಎಂದು ಅನಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT