ಬುಧವಾರ, ಜನವರಿ 26, 2022
26 °C
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ

‘ಪಿಡಿಒ ಸಾವು: ಸತ್ಯ ಬಯಲಿಗೆ ಬರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ನಿಗೂಢವಾಗಿ ಸಾವನ್ನಪ್ಪಿದ ಜಿಲ್ಲೆಯ ಔರಾದ್ ತಾಲ್ಲೂಕಿನ ಜಂಬಗಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ ಲೋಹಾರ ಅವರ ಸಾವಿನ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಮುಖ್ಯಮಂತ್ರಿಯವರಿಗೆ ಬರೆದ ಮನವಿಪತ್ರವನ್ನು ತಹಶೀಲ್ದಾರ್ ಪಲ್ಲವಿ ಬೆಳಕಿರೆ ಅವರಿಗೆ ಸಲ್ಲಿಸಿದರು.

ರಮೇಶ ಅವರು ಈ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲೂ ಕೆಲಸ ಮಾಡಿ ವರ್ಗವಾಗಿ ಜಂಬಗಿಗೆ ಹೋಗಿದ್ದರು. ಅಲ್ಲಿನ ಅವರ ಮನೆಯಿಂದ ಕೆಲ ದಿನಗಳಿಂದ ಕಾಣೆಯಾಗಿದ್ದರು. ನಂತರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಇದು ಕೊಲೆಯೋ ತಿಳಿಯದಾಗಿದೆ. ಅವರ ಸಾವಿಗೆ ಕಾರಣವೂ ಗೊತ್ತಾಗುತ್ತಿಲ್ಲ. ಎಲ್ಲ ಅಭಿವೃದ್ಧಿ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಸತ್ಯ ಬಯಲಿಗೆಳೆಯಬೇಕು ಎಂದು ಆಗ್ರಹಿಸಲಾಯಿತು.

ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಖನಕೋರೆ, ಪ್ರಧಾನ ಕಾರ್ಯದರ್ಶಿ ಕೆ.ಆನಂದ, ಸಹಾಯಕ ನಿರ್ದೇಶಕ ಸಂತೋಷ ಚವಾಣ್, ಬಾಬು ನಿಲಂಗೆ, ರಮೇಶ ಮಿಲಿಂದಕರ್, ಪ್ರಭು ಬಿರಾದಾರ, ಮಲ್ಲನಗೌಡ ಬಿರಾದಾರ, ಚಂದ್ರಾಮ ಧೂಳಖೇಡ್, ಪದ್ಮಪ್ಪ ಗಾಣಿಗೇರ್, ಮುತ್ತುರಾಜ್ ಹೊರದೊಡ್ಡೆ, ರವಿ ಶಿಂಗಾರೆ, ವೀರಾರೆಡ್ಡಿ, ರಾಮಲಿಂಗಯ್ಯ ಸ್ವಾಮಿ, ವಿಜಯಕುಮಾರ, ಅರ್ಜುನ ಶಿಂಧೆ, ಗಿರೀಶ ಹೆಗಡ್ಯಾಳ್, ರಾಜಕುಮಾರ ಖಂಡ್ರೆ, ವಿಷ್ಣುಕಾಂತರೆಡ್ಡಿ, ಅಶೋಕ ಉಚ್ಛೇಕರ್, ಸುನಿಲಕುಮಾರ ಝಿಳ್ಳೆ, ಇಂದುಮತಿ ಹಾಗೂ ಅಂಬಿಕಾ ಇದ್ದರು.

ಇದಕ್ಕೂ ಮೊದಲು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಿ, ಇಒ ಕಿರಣ ಪಾಟೀಲ ಅವರಿಗೂ ಮನವಿಪತ್ರ ಸಲ್ಲಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.